Breaking
24 Mar 2026, Tue

ಸಿದ್ಧಕಟ್ಟೆ: 7ನೇ ವರ್ಷದ ಶಾರದಾ ಮಹೋತ್ಸವ ಸಮಾಪನ, ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ

ಬಂಟ್ವಾಳ: ಸಿದ್ಧಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ವತಿಯಿಂದ 7 ನೇ ವರ್ಷದ ‘ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಸೆ. 30 ರಂದು ಸಮಾಪನಗೊಂಡಿತು.

ಈ ಮಹೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಜೊತೆಗೆ ಮಾನವೀಯ ಮೌಲ್ಯ ವೃದ್ಧಿಸಿಕೊಂಡು ಎಲ್ಲಾ ಜಾತಿ ಧರ್ಮಗಳ ಭಕ್ತರನ್ನು ಒಗ್ಗೂಡಿಸಿ ಆಚರಿಸುವ ಧಾರ್ಮಿಕ ಉತ್ಸವಗಳು ಮಾನಸಿಕ ನೆಮ್ಮದಿ ನೀಡುತ್ತದೆ. ಧಾರ್ಮಿಕತೆಯ ಜೊತೆಗೆ ಅನಾರೋಗ್ಯಪೀಡಿತರು ಮತ್ತು ಅಶಕ್ತರ ನೆರವಿಗೆ ಶ್ರಮಿಸುತ್ತಿರುವ ಸಿದ್ಧಕಟ್ಟೆ ಶಾರದೋತ್ಸವ ಆಚರಣಾ ಸಮಿತಿ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.

ರಾಜ್ಯ ರೈತ ಸಂಘ ಹಸಿರು ಸೇವೆ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಧಾರ್ಮಿಕ ಉಪನ್ಯಾಸ ನೀಡಿದರು. ಇದೇ ವೇಳೆ ಸ್ಥಳೀಯ ನಾಟಿ ವೈದ್ಯ ಪಂಡಿತ್ ವಿಶ್ವನಾಥ ಪೂಜಾರಿ, ಯಶೋಧರ ಶೆಟ್ಟಿಗಾರ್ ಸಿದ್ಧಕಟ್ಟೆ ಹಾಗೂ ಮೆಸ್ಕಾಂ ಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಉಚಿತ ಆಂಬುಲೆನ್ಸ್ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ನೋಟರಿ ವಕೀಲ ಅಶ್ವನಿ ಕುಮಾರ್ ರೈ, ಮೂಲ್ಕಿ ಲಯನ್ಸ್ ಕ್ಲಬ್ ಸದಸ್ಯ ವೆಂಕಟೇಶ್ ಹೆಬ್ಬಾರ್, ಕೃಷ್ಣ ಭಟ್ ಅಸ್ರಣ್ಣ ಕಲ್ಲಬೆಟ್ಟು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಉಪನ್ಯಾಸಕ ಹರಿಪ್ರಸಾದ್ ಶೆಟ್ಟಿ, ಸಿದ್ಧಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಚಂದಪ್ಪ ಮೂಲ್ಯ, ಸಂತೋಷ್ ಕುಮಾರ್ ಚೌಟ ಶುಭ ಹಾರೈಸಿದರು.

ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಅಂಗರಕುಮೇರು, ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ ಪೂಂಜ ಮತ್ತಿತರರು ಇದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ್ ಶೆಟ್ಟಿ ಬಡಾಜೆ, ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ನವೀನ್ ಕೋಟ್ಯಾನ್ ಬಿ.ಸಿ.ರೋಡು ಭೇಟಿ ನೀಡಿದರು.

ಪ್ರಧಾನ ಸಂಚಾಲಕ ಜಗದೀಶ ಕೊಯಿಲ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನವೀನ ಎಂ.ಮಂಜಿಲ ವಂದಿಸಿದರು. ಕಲಾವಿದ ಪುರುಷೋತ್ತಮ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *