ಕುಂದಾಪುರ: ಬುಡ ಸಮೇತ ಬೃಹತ್ ಗಾತ್ರದ ಮರವೊಂದು ಧರೆಗುರುಳಿ ಅಪಾರ ಮಟ್ಟದ ಹಾನಿಯಾದ ಘಟನೆ ಕುಂದಾಪುರದ ಹಳೆಯ ತಾಲೂಕು ಕಚೇರಿ ಬಳಿ ಅ.2 ರಂದು ನಡೆದಿದೆ.
ಕಚೇರಿ ಬಳಿಯಿದ್ದ ದಶಕಗಳಷ್ಟು ಹಳೆಯದಾದ ಈ ಮರವು ಗುರುವಾರ ಸಂಜೆ ಬುಡ ಸಮೇತ ಉರುಳಿ ಬಿದ್ದಿದ್ದು, ಕುಂದಾಪುರ ಮಾರ್ಕೆಟ್ ಉಪ ಅಂಚೆ ಕಚೇರಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳಿಗೆ ಹಾನಿ ಉಂಟಾಗಿದೆ.

ಮರ ಬಿದ್ದ ಪರಿಣಾಮ, ಸಮೀಪದ ವಿದ್ಯುತ್ ಕಂಬಗಳಿಗೂ ಹಾನಿ ಸಂಭವಿಸಿದೆ. ಅದೃಷ್ಟವಶಾತ್, ಅಂದು ಸರ್ಕಾರಿ ರಜೆ ಇದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೊತೆಗೆ ಘಟನೆ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ಸಂಭವನೀಯ ಅಪಾಯ ತಪ್ಪಿದೆ. ಮರವು ನೇರವಾಗಿ ಕಟ್ಟಡದ ಮೇಲೆ ಬಿದ್ದಿದೆ. ಬಿದ್ದ ಮರವು ಕಟ್ಟಡಕ್ಕೆ ವಾಲಿಕೊಂಡಿದೆ.

ಕುಂದಾಪುತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.



