Breaking
22 Mar 2026, Sun

ಕಾಸರಗೋಡುವಿನ ಕಾಞಂಗಾಡ್ ನಲ್ಲಿ ಯುವ ಇಂಜಿನಿಯರ್ ನಿಗೂಢವಾಗಿ ನಾಪತ್ತೆ

ಕಾಸರಗೋಡು: ಯುವ ಇಂಜಿನಿಯರ್‌ವೊಬ್ಬರು ನಿಗೂಢವಾಗಿ ನಾಪತ್ತೆಯಾದ ಘಟನೆ ಕಾಸರಗೋಡು ಸಮೀಪದ ಕಾಞಂಗಾಡ್ ಬಳಿ ಅ.2 ರಂದು ನಡೆದಿದೆ.

ಕಾಞಂಗಾಡ್ ಸೌತ್ ಮಾತೋತ್ ಕ್ಷೇತ್ರ ಬಳಿಯ ನಿವಾಸಿ ಯು.ಕೆ.ಜಯಪ್ರಕಾಶ್ ಎಂಬವರ ಪುತ್ರ ಪ್ರಣವ್(33) ನಾಪತ್ತೆಯಾದ ಯುವಕ.

ಗುರುವಾರ ಸಾಯಂಕಾಲ 7 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದ ಪ್ರಣವ್ ಅವರು ಅನಂತರ ಹಿಂತಿರುಗಿರಲಿಲ್ಲವೆಂದು ಹೊಸದುರ್ಗ ಪೊಲೀಸರಿಗೆ ತಂದೆ ದೂರು ನೀಡಿದ್ದಾರೆ. ಇವರ ಮೊಬೈಲು ಫೋನ್, ಚಪ್ಪಲಿ ಬೇಕಲ ಕೋಟೆ ಪರಿಸರದಲ್ಲಿ ಪತ್ತೆಯಾಗಿವೆ.

ಇವರು ಸಮುದ್ರದಲ್ಲಿ ನಾಪತ್ತೆಯಾಗಿರಬಹುದೇ ಎಂಬ ಶಂಕೆ ಉಂಟಾಗಿದೆ. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *