ಬಂಟ್ವಾಳ: ರೋಟರಿ ಪದವಿ ಪೂರ್ವ ಕಾಲೇಜು ಮೂಡಬಿದಿರೆ ರಾಷ್ಟ್ರಿಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ) ಸಿದ್ದಕಟ್ಟೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಮಾತನಾಡಿ ಜಗತ್ತಿನಲ್ಲಿ ಭಾರತ ಅತೀ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರವಾಗಿದ್ದು ಶಾಲಾ -ಕಾಲೇಜ್ ಗಳಲ್ಲಿನ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಪಡೆಯುವ ಮೂಲಕ ಗುರು, ಹಿರಿಯರಿಗೆ ಗೌರವ ನೀಡಬೇಕು. ಒಳ್ಳೆಯ ಮಾತುಗಾರಿಕೆ ಮತ್ತು ನಡವಳಿಕೆ ಹಾಗೂ ಒಳ್ಳೆಯ ವ್ಯಕ್ತಿಗಳ ಸಂಪರ್ಕದಿಂದ ಜೀವನದಲ್ಲಿ ಎಲ್ಲಾವನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಸ್ತುತ ಸನ್ನಿವೇಶಗಳ ಅನಿವಾರ್ಯತೆಯನ್ನು ಮನಗಂಡು ಆತ್ಮ ನಿರ್ಭರ ಭಾರತ ಸಂಕಲ್ಪದಡಿಯಲ್ಲಿ ನಮ್ಮೊಳಗೇ ಸ್ವದೇಶಿ ಚಿಂತನೆಯನ್ನು ಅಳವಡಿಸಿಕೊಂಡು ನಮ್ಮ ದೇಶದಲ್ಲಿ ಉತ್ಪಾದನೆ ಯಾಗುವ ಸ್ವದೇಶಿ ಉತ್ಪನ್ನಗಳನ್ನು ಎಲ್ಲರ ಮನೆಯಲ್ಲಿ ಬಳಕೆ ಮಾಡುವುದರೊಂದಿಗೆ ಪ್ರತಿ ಮನೆಯೂ ಸ್ವದೇಶಿ -ಮನೆ ಮನೆಯೂ ಸ್ವದೇಶಿ ಯಾಗುವುದರೊಂದಿಗೆ ರಾಷ್ಟ್ರ ಸೇವೆಯಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರೋ. ನಾರಾಯಣ ಪಿ. ಎಂ. ಶುಭ ಹಾರೈಸಿದರು.
ವೇದಿಕೆಯಲ್ಲಿ ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರೋ. ಅನಂತ ಕೃಷ್ಣ ರಾವ್,ಸಂಚಾಲಕರಾದ ರೋ. ಪ್ರವೀಣ್ ಚಂದ್ರ ಜೈನ್, ರೋ ಜೆ. ಡಬ್ಲೋ. ಪಿಂಟೋ, ರೋ. ಡಾ ಸುದೀಪ್ ಕುಮಾರ್ ಜೈನ್,ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಸ್ಥಾಪಕ ಅಧ್ಯಕ್ಷ ರೋ. ಮೈಕಲ್ ಡಿ ಕೊಸ್ತ, ಕಾರ್ಯದರ್ಶಿ ರೋ.ಟೀನಾ ಡಿ ಕೊಸ್ತ, ರೋಟರಿ ಪದವಿ ಪೂರ್ವ ಕಾಲೇಜನ ಪ್ರಾಂಶುಪಾಲರಾದ ರವಿಕುಮಾರ್, ಎನ್. ಎಸ್. ಎಸ್. ಯೋಜನಾಧಿಕಾರಿ ನಯನ ದಿನೇಶ್ ಕೋಟ್ಯಾನ್, ಶಿಬಿರದ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



