ಬಂಟ್ವಾಳ: ಬಿ ಸಿ ರೋಡಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸೋಮಯಾಜಿ ಕಾಂಪ್ಲೆಕ್ಸ್ ಮೇಲಿನ ಅಂತಸ್ತಿನ ಸ್ಲ್ಯಾಬ್ ನಿಂದ ಕಬ್ಬಿಣದ ರಾಡ್ ಕಾರಿನ ಮೇಲೆ ಬಿದ್ದು ಕಾರಿನ ಗಾಜು ಪುಡಿಯಾದ ಘಟನೆ ನಡೆದಿದೆ.

ಕಾಂಪ್ಲೆಕ್ಸ್ ನ ಎದುರುಗಡೆ ಪಾರ್ಕ್ ಮಾಡಲಾಗಿದ್ದ ಕಾರಿನ ಮುಂಭಾಗದ ಗಾಜಿನ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಕಾರಿನೊಳಗಡೆ ಯಾರೂ ಇರದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.
ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಟ್ರಾಫಿಕ್ ಪೊಲೀಸ್ ಎಸ್.ಐ.ಸುತೇಶ್ ತಿಳಿಸಿದ್ದಾರೆ.





