Breaking
22 Mar 2026, Sun

ಮೈದಾನದಲ್ಲಿ ಕುಸಿದು ಬಿದ್ದು 10 ವರ್ಷದ ಬಾಲಕ ಸಾವು

ಕಾಸರಗೋಡು: ಶಾಲಾ ಆಟೋಟ ಸ್ಪರ್ಧೆಯಲ್ಲಿ ವಿದ್ಯಾರ್ಥಿಯೋರ್ವ ಮೈದಾನದಲ್ಲಿ ಕುಸಿದು ಬಿದ್ದು ಮತಪಟ್ಟ ಘಟನೆ ಸೆ. 23 ರಂದು ನಡೆದಿದೆ.

ಮೃತಪಟ್ಟ ಬಾಲಕನನ್ನು ಉತ್ತರ ಪ್ರದೇಶದ ಮುರ್ಷಿದಾಬಾದ್ ನ ಇನ್ಸಾಫಾಲಿ ಎಂಬವರ ಪುತ್ರನಾಗಿದ್ದು, ಮಂಗಲಾ ಡಿ.ಜಿ.ಬಿ.ಎಲ್. ಪಿ ಶಾಲೆಯ ವಿದ್ಯಾರ್ಥಿ ಹಸನ್ ರಾಝ (10) ಎಂದು ಗುರುತಿಸಲಾಗಿದೆ.

ಶಾಲಾ ಕ್ರೀಡಾ ಚಟುವಟಿಕೆಯ ವೇಳೆ ಕುಸಿದು ಬಿದ್ದಿದ್ದು ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

I

Leave a Reply

Your email address will not be published. Required fields are marked *