Breaking
29 Jun 2026, Mon

ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆ

ಬಂಟ್ವಾಳ: ಸಜೀಪ ಮುನ್ನೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಷಷ್ಠಿ ಪೂಜೆಯ ಪೂರ್ವಭಾವಿ ಸಿದ್ಧತಾ ಸಭೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಶ್ರೀತಾಯ ಕಾರ್ಯಕ್ರಮದ ರೂಪುರೇಷೆ ನೀಡಿದರು. ಸಮಿತಿ ಸದಸ್ಯರಾದ ಎ. ಕೆ ಶಿವ ಹರಿಪ್ರಸಾದ್ ಭಂಡಾರಿ, ರಾಜು ಪೂಜಾರಿ, ಅರ್ಚಕ ಕೃಷ್ಣ ಭಟ್, ಸುಮಂತ್, ಧನಂಜಯ ಶೆಟ್ಟಿ ,ಯುವಕ ಮಂಡಲದ ಅಧ್ಯಕ್ಷ ದೀಕ್ಷಿತ್ ಶೆಟ್ಟಿ ಮೊದಲಾದವರು ಸೂಕ್ತ ಸಲಹೆ ಸೂಚನೆ ನೀಡಿದರು.

ಈ ವೇಳೆ ಯಕ್ಷಗಾನ, ತಾಳ ಮದ್ದಳೆ, ಭಜನಾ ಕಾರ್ಯಕ್ರಮ, ಯಕ್ಷಗಾನ ಬಯಲಾಟ, ನಾಟಕ , ಅನ್ನದಾನದೊಂದಿಗೆ ಆಶ್ಲೇಷ ಬಲಿ ಪೂಜೆ ವಿವಿಧ ಕಾರ್ಯಕ್ರಮ ದೇವರ ಬಲಿ ಉತ್ಸವ ರಂಗ ಪೂಜೆ ವಿಜೃಂಭಣೆಯಿಂದ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.

Leave a Reply

Your email address will not be published. Required fields are marked *