ತಾವೇ ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರಿಗೆ ನೀಡಿ ಸಂತೃಪ್ತಿ ಕಂಡುಕೊಂಡ ಅಣ್ಣಲಿಕೆಯ ಕೃಷಿಕ ಆನಂದ ಕೆ

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸೊಂದಿದ್ದರೆ ಮಾರ್ಗವು ಉಂಟುಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು… ಎಂಬ ಹಾಡಿನ ಸಾಲಿನಂತೆ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಂತೃಪ್ತರಾದ ಬಂಟ್ವಾಳ ತಾಲೂಕಿನ ಅಣ್ಣಲಿಕೆಯ ಆನಂದ ಎನ್ನುವವರ ಕೃಷಿಯ ಬಗ್ಗೆ ಒಂದೆರಡು ವಿಷಯ ನಿಮ್ಮ ಮುಂದೆ.

ಆನಂದ ಕೆ ಅಣ್ಣಳಿಕೆ ಇವರು ವೃತ್ತಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.10ವರ್ಷಗಳಿಂದಲೂ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಹಲವಾರು ರೀತಿಯ ತರಕಾರಿ ಬೆಳೆದು ಬೇರೆ ಬೇರೆ ಊರುಗಳಿಗೆ ಅಂಗಡಿಗಳಿಗೆ ತಾವು ಬೆಳೆದ ಬೆಳೆಯನ್ನು ಕೊಡುತ್ತಿದ್ದರು.ಪ್ರಸ್ತುತ 1 ತಿಂಗಳಿನಿಂದೀಚೆಗೆ ತಮ್ಮ ಮನೆ ಎದುರಿನ ಮುಖ್ಯ ರಸ್ತೆಯ ಬಳಿ ಸಣ್ಣದೊಂದು ಗೂಡಂಗಡಿ ಇಟ್ಟುಕೊಂಡು ತಾವೇ ಬೆಳೆದ ಬೆಂಡೆಕಾಯಿ, ಹಿರೇಕಾಯಿ, ಸೋರೆ ಕಾಯಿ, ಮುಳ್ಳು ಸೌತೆ, ಆಗಲ ಕಾಯಿ, ಬಸಳೆ ಹೀಗೆ ನಾನಾ ರೀತಿಯ ತರಕಾರಿಯನ್ನು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ನೀಡುತ್ತಿದ್ದಾರೆ.

ಇಲ್ಲಿಂದ ಒಮ್ಮೆ ತರಕಾರಿ ಕೊಂಡುಹೋದ ಗ್ರಾಹಕರು ಮರಳಿ ಇವರ ಬಳಿ ಬಂದು ಖರೀದಿಸುತ್ತಾರೆ.ಬಂದ ಗ್ರಾಹಕರಿಗೆ ನಗುಮೊಗದಿಂದ ಮಾತನಾಡಿಸಿ ತಾವು ಬೆಳೆದ ಬೆಳೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಇವರು ತರಕಾರಿ ಬೆಳೆಯುತ್ತಾರೆ.ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ದೂರದೂರಿನಿಂದ ಬಂದ ಪ್ರವಾಸಿಗರು, ಸ್ಥಳೀಯರು ಇವರ ಬಳಿ ತರಕಾರಿ ಖರೀದಿಸುತ್ತಾರೆ.ಮೊದಮೊದಲು ಪ್ಲಾಸ್ಟಿಕ್ ಚೀಲದಲ್ಲಿ ಇವರು ತರಕಾರಿ ಬೀಜವನ್ನು ಹಾಕಿ ಬೆಳೆಯುತ್ತಿದ್ದರು, ಇದೀಗ ಇವರು ಬೆಳೆದ ತರಕಾರಿಗೆ ಹೆಚ್ವಿನ ಬೇಡಿಕೆ ಇರುವ ಕಾರಣ ನೆಲದಲ್ಲಿ ಬೆಳೆಯುತ್ತಿದ್ದಾರೆ.ಇವರ ಈ ಕೃಷಿ ಕಾರ್ಯಕ್ಕೆ ಇವರ ಪತ್ನಿ ಶೋಭಾ ಇವರಿಗೆ ಸಾಥ್ ನೀಡುತ್ತಿದ್ದು ಯುವ ಸಮುದಾಯಕ್ಕೆ ಇವರು ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *