ಬಂಟ್ವಾಳ : ತಾಲೂಕಿನ ಸಿದ್ದಕಟ್ಟೆಯಲ್ಲಿ ಕಳೆದ 15 ವರ್ಷ ಗಳಿಂದ ವಿವಿಧ ಸಂಘ, ಸಂಸ್ಥೆಗಳಾದ ಗ್ರಾಮ ಪಂಚಾಯತ್ ಸಂಗಬೆಟ್ಟು, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ರೋಟರಿ ಕ್ಲಬ್ ಲೋರಟ್ಟೋ ಹಿಲ್ಸ್, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆ ಗಳ ನೆರವಿನಿಂದ,ಕರ್ನಾಟಕ ಮಹಿಳಾ ಪಾಲಿಟೇಕ್ನಿಕ್ ಕದ್ರಿಹಿಲ್ಸ್ ಮಂಗಳೂರು ಇದರ ವಿಶೇಷ ಯೋಜನೆ ಅಡಿಯಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಗ್ರಾಮೀಣ ನಿರುದ್ಯೋಗ ಮಹಿಳೆಯರಿಗೆ ಉಚಿತ ಟೈಲರಿಂಗ್ ಮತ್ತು ಪ್ಯಾಶನ್ ಡಿಸೈನಿಂಗ್ ತರಬೇತಿ ನೀಡಿ ಮಹಿಳೆಯರ ಬಾಳಿನಲ್ಲಿ ಬೆಳಕು ಚೆಲ್ಲಿದ ಟೈಲರಿಂಗ್ ಶಿಕ್ಷಕಿ ಕು.ಪ್ರೇಮಾ ಸುಂದರ ಶಾಂತಿ ಯವರಿಗೆ ಗುರುವಂದನಾ ಕಾರ್ಯಕ್ರಮ ಸಿದ್ದಕಟ್ಟೆಯ ಪಿಂಕಿ ಟವರ್ಸ್ ನಲ್ಲಿ ನಡೆಯಿತು.
ತರಬೇತಿ ಪಡೆಯುತ್ತಿರುವ ತರಬೇತಿದಾರರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಫಲ ಪುಷ್ಪದೊಂದಿಗೆ ಸ್ಮರಣಿಕೆ ನೀಡಿ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ನೆರೆವೇರಿಸಿ ಗೌರವ ಅರ್ಪಿಸಿದರು.




