ಮೂಡಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ಹಿಂದಿ ಉತ್ಸವ

ಮೂಡಬಿದಿರೆ:ನಗರದ ಎಕ್ಸಲೆಂಟ್ ಪಿಯು ಕಾಲೇಜುನಲ್ಲಿ ಸೆ. 09ರಂದು ‘ಹಿಂದಿ ಉತ್ಸವ’ ಕಾರ್ಯಕ್ರಮ ನಡೆಯಿತು.

ಎಕ್ಸಪರ್ಟ್ ಕಾಲೇಜ್ ವಳಚ್ಚಿಲ್ ಮಂಗಳೂರು ಇದರ ಹಿಂದಿ ವಿಭಾಗದ ಮುಖ್ಯಸ್ಥರಾದ ಜಗದೀಶ್ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲಾ ಭಾಷೆಗಳನ್ನು ಪ್ರೀತಿಸಿ ಆದರೆ ಮಾತೃ ಭಾಷೆಗೆ ಹೃದಯದಲ್ಲಿ ಸ್ಥಾನ ಕೊಡಿ. ಅದೇ ರೀತಿ ಮನುಷ್ಯ ಧನ ಕನಕ ಇಲ್ಲದೆ ಬಡವನಾಗಬಹುದು ಆದರೆ ಹೃದಯದಿಂದ ಎಂದೂ ಬಡವನಾಗಬಾರದು ಎಂದರು.

ಇದೇ ವೇಳೆ ವಿದ್ಯಾರ್ಥಿನಿ ಶಾಂಭವಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿ ಭಾಷೆಯಲ್ಲಿ ಸುಲಲಿತವಾಗಿ ನೆರವೇರಿಸಿಕೊಟ್ಟರು. ಅದೇ ರೀತಿ ಕಾಲೇಜು ಹಾಗೂ ಹೈಸ್ಕೂಲಿನ ಮುದ್ದು ಮಕ್ಕಳು ಜಂಟಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿಕೊಟ್ಟರು.

ಈ ಸಂದರ್ಭ ಎಕ್ಸಲೆಂಟ್ ಕಾಲೇಜಿನ ಮುಖ್ಯಸ್ಥೆ ರಶ್ಮಿತಾ ಜೈನ್ , ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ ಕುಮಾರ ಶೆಟ್ಟಿ, ಎಕ್ಸಲೆಂಟ್ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಕಾಲೇಜು ಹಿಂದಿ ವಿಭಾಗದಿಂದ ಶಿಕ್ಷಕಿ ದಿವ್ಯಾಲಕ್ಷ್ಮಿ ಹಾಗೂ ಹೈಸ್ಕೂಲ್ ಹಿಂದಿ ವಿಭಾಗದಿಂದ ಶಿಕ್ಷಕ ನವೀನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *