Breaking
29 Jun 2026, Mon

ಉಜಿರೆಯ ಎರಡು ಅಂಗಡಿಗಳಲ್ಲಿ ಕಳ್ಳರ ಕೈ ಚಳಕ

ಉಜಿರೆ: ಅಂಗಡಿ ಮತ್ತು ಹೋಟೆಲ್ ಗೆ ಕಳ್ಳರು ನುಗ್ಗಿದ ಘಟನೆ ಚಾರ್ಮಾಡಿ ರಸ್ತೆಯ ಮಾರಿಗುಡಿ ದೇವಸ್ಥಾನದ ಸಮೀಪ ಸೆ.6ರಂದು ನಡೆದಿದೆ.

ಬೀಗ ಮುರಿದು ಒಳನುಗ್ಗಿರುವ ಕಳ್ಳರು ಅಂಗಡಿಯಿಂದ 3ಸಾವಿರ ಬೆಳೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹೋಟೆಲಿನಿಂದ ಸಣ್ಣ ಪುಟ್ಟ ವಸ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *