Breaking
24 Sep 2026, Thu

ಮಧ್ಯಪ್ರದೇಶದಲ್ಲಿ 5.2 ಕೆಜಿ ತೂಕದ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ

ಮಧ್ಯಪ್ರದೇಶ: 5.2 ಕೆಜಿ ತೂಕದ ಆರೋಗ್ಯವಂತ ಗಂಡು ಮಗುವಿಗೆ ಮಹಿಳೆ ಜನ್ಮಕೊಟ್ಟ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ.

ಶುಭಾಂಗಿ ಯಾದವ್ ಮಗುವಿಗೆ ಜನ್ಮ ನೀಡಿದ ಮಹಿಳೆ.

ಇದು ವೈದ್ಯಲೋಕಕ್ಕೆ ಅಚ್ಚರಿಯ ಸಂಗತಿಯಾಗಿದ್ದು,ಸಾಮಾನ್ಯವಾಗಿ ಶಿಶು 2.8 ರಿಂದ 3.2 ಕೆಜಿ ತೂಕವಿರುತ್ತವೆ.

ನವಜಾತ ಶಿಶುವಿನ ಗಾತ್ರವು ದೊಡ್ಡದಾಗಲು ಒಂದು ಕಾರಣವೆಂದರೆ ಗರ್ಭಾವಸ್ಥೆಯಲ್ಲಿ ಶುಭಾಂಗಿ ಸೇವಿಸಿದ ಪೌಷ್ಟಿಕ ಆಹಾರ. ತಾಯಿ ಯಾವುದೇ ವಿಶೇಷ ಆಹಾರವನ್ನು ತಿನ್ನಲಿಲ್ಲ. ಬೇಳೆ, ಅನ್ನ, ರೊಟ್ಟಿ ಮತ್ತು ತರಕಾರಿಗಳನ್ನು ಒಳಗೊಂಡಂತೆ ನಿಯಮಿತ ಊಟವನ್ನು ಸೇವಿಸಿದ್ದರು. ಆದರೆ ಆರೋಗ್ಯಕರ ಜೀವನಶೈಲಿಯು ಸಕಾರಾತ್ಮಕವಾಗಿ ಸಹಾಯ ಮಾಡಿದೆ.

2021 ರಲ್ಲಿ 5.1 ಕೆಜಿ ತೂಕದ ಮಗು ಮಾಂಡ್ಲಾ ಜಿಲ್ಲೆಯಲ್ಲಿ ಜನಿಸಿತ್ತು. ಇದೀಗ ಈ ದಾಖಲೆಯನ್ನು ಈ ಮಗು ಮುರಿದಿದೆ.

Leave a Reply

Your email address will not be published. Required fields are marked *