Breaking
23 Mar 2026, Mon

ತುಂಬೆ ಗ್ರಾಮದಲ್ಲಿ ನಡೆದ ಗೋ ಹತ್ಯೆ ಪ್ರಕರಣ; ಮೂವರ ಬಂಧನ

ಬಂಟ್ವಾಳ: ತುಂಬೆ ಗ್ರಾಮದಲ್ಲಿ ಆ.14ರಂದು ನಡೆದ ಗೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ಉಳ್ಳಾಲ ಚೆಂಬುಗುಡ್ಡೆಯ ಇರ್ಷಾದ್ (34), ಮಂಗಳೂರಿನ ಕುದ್ರೋಳಿಯ ಮೊಹಮ್ಮದ್ ಮನ್ಸೂರ್ (48) ಮತ್ತು ಮಂಗಳೂರಿನ ಕಣ್ಣೂರಿನ ಅಬ್ದುಲ್ ಅಝೀಮ್ (18) ಎಂದು ಗುರುತಿಸಲಾಗಿದೆ.

ಆರೋಪಿಗಳು ತುಂಬೆ ಬಳಿ ಜಾನುವಾರು ಕಳವು ಮಾಡಿದ್ದು, ಮರುದಿನ ಹತ್ಯೆಗೈದ ಜಾನುವಾರುಗಳ ಅವಶೇಷಗಳು ಪತ್ತೆಯಾಗಿವೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಇದೇ ಆರೋಪಿಗಳು ಸೆ.4ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಗೋಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *