Breaking
23 Mar 2026, Mon

ಕುಂದಾಪುರದಲ್ಲಿ ಮಹಿಳೆಯೊಬ್ಬಳು ಖಾಯಿಲೆಯಿಂದ ಬೇಸತ್ತು ಆತ್ಮಹತ್ಯೆ

ಕುಂದಾಪುರ: ಮಹಿಳೆಯೊಬ್ಬರು ತನಗಿರುವ ಖಾಯಿಲೆಯಿಂದ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಿಣ್ಕು(56) ಎಂದು ತಿಳಿದು ಬಂದಿದೆ.

ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಇವರು ಔಷಧಿಯನ್ನು ಸೇವಿಸುತ್ತಿದ್ದರು. ತನಗಿರುವ ಖಾಯಿಲೆಯಿಂದ ಜೀವನದಲ್ಲಿ ಬೇಸತ್ತು ಮನೆಯ ಊಟದ ಕೋಣೆಯ ತಾರಸಿಗೆ ಅಳವಡಿಸಿದ ಸೀಲಿಂಗ್‌ ಪ್ಯಾನಿಗೆ ನೈಲಾನ್‌ ಸೀರೆ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *