ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರು ಮಂದಿರ ನೇಲ್ಯಪಲ್ಕೆ ಇದರ ಆಶ್ರಯದಲ್ಲಿ ಬಿಲ್ಲವ ಯುವ ಘಟಕ ಸಮಿತಿ ಮಣಿನಾಲ್ಕೂರು ವತಿಯಿಂದ “ಗುರುಪೂಜೆ ದಸರಾ ಕ್ರೀಡಾಕೂಟ 2025” ಕಾರ್ಯಕ್ರಮವು ಸೆ. 7 ರಂದು ಅಜಿಲಮೊಗರು ನೇಲ್ಯಪಲ್ಕೆ ಬ್ರಹಶ್ರೀ ನಾರಾಯಣಗುರು ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ದೀಪ ಪ್ರಜ್ವಲನೆಯೊಂದಿಗೆ ಆರಂಭವಾಗಲಿದ್ದು ಶ್ರೀ ಕಡೆದಿ ಭದ್ರಕಾಳಿ ಕ್ಷೇತ್ರ ನರಿಕೊಂಬುವಿನ ಪ್ರಧಾನ ಅರ್ಚಕರು ಕೇಶವ ಶಾಂತಿ ಹೇರಮಳ ಅವರು ದೀಪ ಬೆಳಗಲಿದ್ದಾರೆ. ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಬಾಚಕೆರೆಯ ಧರ್ಮದರ್ಶಿಗಳು ದೇಜಪ್ಪ ಬಾಚಕೆರೆ ನೆರವೇರಿಸಲಿದ್ದಾರೆ. ಸಭಾ ಅಧ್ಯಕ್ಷರಾಗಿ ಮಣಿನಾಲ್ಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶಿವಪ್ಪ ಪೂಜಾರಿ ಹಟದಡ್ಕ, ಹಾಗೂ ಮುಖ್ಯ ಅತಿಥಿಗಳಾಗಿ ಉದ್ಯಮಿ ಅನಿಲ್ ಪೂಜಾರಿ ಮಂಗಳೂರು, ಶ್ರೀ ಕ್ಷೇತ್ರ ಕುದ್ರೋಳಿಯ ಅರ್ಚಕ ನವೀನ್ ಶಾಂತಿ ಕೋಕಲ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನೇಲ್ಯಪಲ್ಕೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕಟ್ಟದೆಡೆ ಸಭಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ವೇಳೆ ಬಿ.ಸಿ.ರೋಡು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಭುವನೇಶ್ವರ ಪಚ್ಚಿನಡ್ಕ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ತುಂಗಪ್ಪ ಬಂಗೇರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಣಿನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ ಪೂಜಾರಿ ಮೊಗರು ಮಜಲು ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಮಾನ ವಿತರಣೆಯನ್ನು ಖ್ಯಾತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಕಂಬಳ ಕೋಣದ ಯಜಮಾನ ತಣಿಯಪ್ಪ ಗೌಡ ಪೆರ್ಗಲ್ ಮತ್ತು ಇತರ ಗಣ್ಯರು ನೆರವೇರಿಸಲಿದ್ದಾರೆ.

ಗಣ್ಯ ಉಪಸ್ಥಿತಿಯನ್ನು ಅಜಿಲಮೊಗರು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಪಡ್ಡಾಯಿಮಜಲು, ಅಜಿಲಮೊಗರು ಕೇಸರಿ ಯುವಕ ಮಂಡಲದ ಅಧ್ಯಕ್ಷ ಸೀತಾರಾಮ ಅಡ್ಯಾಲು ಹಾಗೂ ಮತ್ತಿತರರು ಉಪಸ್ಥಿತರಿರಲಿದ್ದಾರೆ.


