Breaking
11 Aug 2026, Tue

ಬೆಳ್ತಂಗಡಿ: ಕಾಡಾನೆಗಳ ಹಾವಳಿ : ಕೃಷಿಗೆ ಅಪಾರ ಹಾನಿ

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಮಜಲು, ಕೆರೆಕೋಡಿ ಮೊದಲಾದ ಸ್ಥಳಗಳಲ್ಲಿ ಕಾಡಾನೆ ಹಿಂಡು ತೋಟಗಳಿಗೆ ನುಗ್ಗಿ ಕೃಷಿ ಹಾನಿ ಉಂಟು ಮಾಡಿದೆ.

ಒಂದು ವಾರದ ಹಿಂದೆ ಬೆಳಗಿನ ಜಾವ ಒಂಟಿ ಸಲಗ ಇಲ್ಲಿನ ಮೃತ್ಯುಂಜಯ ನದಿಯ ಪರಿಸರದಲ್ಲಿ ಕಂಡುಬಂದಿತ್ತು ಎನ್ನಲಾಗಿದೆ.

ಕಾಡಾನೆಯ ಹಿಂಡಿನಲ್ಲಿ ಒಂದು ಮರಿಯಾನೆ ಸಹಿತ ಐದು ಆನೆಗಳಿರುವ ಶಂಕೆ ವ್ಯಕ್ತವಾಗಿದ್ದು, ಕಾಡಾನೆಗಳ ಹಿಂಡು ಈ ಪರಿಸರದಲ್ಲಿ ಲಗ್ಗೆ ಇಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *