ಬೆಳ್ತಂಗಡಿ: ರಾಣಿ ಅಬ್ಬಕ್ಕ ರವರ 500ನೇ ಜಯಂತಿಯ ಪ್ರಯುಕ್ತ ಎಬಿವಿಪಿಯಿಂದ ಸೆ. 6 ರಿಂದ 16ರರ ವರೆಗೆ ನಡೆಯಲಿರುವ ರಾಣಿ ಅಬ್ಬಕ್ಕ ರಥಯಾತ್ರೆಯ ಪೋಸ್ಟರ್ ನ ಬಿಡುಗಡೆ ಕಾರ್ಯಕ್ರಮ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಎಕ್ಸಲ್ ಕಾಲೇಜಿನಲ್ಲಿ ಸೆ.3 ರಂದು ನಡೆಯಿತು.

ಎಕ್ಸಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ರಥಯಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಪ್ರಾಂತ ಅಧ್ಯಕ್ಷರಾದ ರವಿ ಮಂಡ್ಯ, ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ , ವಿಭಾಗ ಸಂಚಾಲಕರದ ಸುವಿತ್ ಶೆಟ್ಟಿ ಉಸ್ಥಿತರಿದ್ದರು.




