Breaking
25 Sep 2026, Fri

ಕರಾವಳಿಗೆ ಎಂಟ್ರಿಕೊಟ್ಟ ಓಮನ್ ದೇಶದ ಬಂಗುಡೆ, ಬೂತಾಯಿ : ಖರೀದಿಗೆ ಮುಗಿಬಿದ್ದ ಮೀನು ಪ್ರಿಯರು

ಮಂಗಳೂರು: ನಮ್ಮ ಕರಾವಳಿಯಲ್ಲಿ ಮೀನು ಬಲೂ ದುಬಾರಿಯಾದ್ರೆ, ಇನ್ನೊಂದೆಡೆ ಓಮನ್ ದೇಶದ ಬಂಗುಡೆ, ಬೂತಾಯಿ ನಮ್ಮಲ್ಲಿಗೆ ಎಂಟ್ರಿ ಕೊಟ್ಟಿದೆ. ಈ ಭಾರೀ ನಮ್ಮಲ್ಲಿ ಮೀನಿನ ಉತ್ಪತ್ತಿ ಕಡಿಮೆಯಾಗಿದ್ದು ಇದನ್ನು ಸರಿದೂಗಿಸಲು ಓಮನ್ ದೇಶದಿಂದ ಈ ಮೀನುಗಳು ಬಂದಿದೆ.

ಹೌದು ಇಲ್ಲಿನ ಬೂತಾಯಿಯ ಎರಡು ಪಟ್ಟು ದೊಡ್ಡದಿರುವ ಸಾಧಾರಣ ಬಂಗುಡೆಯಷ್ಟು ಈ ಒಮಾನ್ ಬೂತಾಯಿ ತೂಗುತ್ತದೆ. ಸಣ್ಣ ಬಂಗುಡೆ ಮತ್ತು ದೊಡ್ಡ ಬೂತಾಯಿ ರುಚಿ ಕಡಿಮೆ. ದೊಡ್ಡ ಬಂಗುಡೆ, ಸಣ್ಣ ಬೂತಾಯಿ ರುಚಿ ಜಾಸ್ತಿ ಎಂಬ ಮಾತಿಗೆ ವ್ಯತಿರಿಕ್ತವಾಗಿ ಈ ಬೂತಾಯಿ ಇದೆ. ಬೂತಾಯಿ ದೊಡ್ಡದಿದ್ದರೂ ರುಚಿಯಲ್ಲಿ ಇಲ್ಲಿನ ಬೂತಾಯಿಯಷ್ಟೆಯಿರುವುದರಿಂದ ಬೇಡಿಕೆಯೂ ಹೆಚ್ಚಿದೆ.

ಪ್ರತಿ ದಿನ ಒಮಾನ್ನಿಂದ ಗೋವಾಗೆ ಬಂದು, ಅಲ್ಲಿಂದ ಮಲ್ಪೆಗೆ ಎರಡು ಕಂಟೈನರ್ ಒಮಾನ್ ಬೂತಾಯಿ ಬರುತ್ತಿದೆ. ಮಲ್ಪೆ ಮಾತ್ರವಲ್ಲದೇ ಮಂಗಳೂರು, ರತ್ನಗಿರಿ, ಪಾಂಡಿಚೇರಿ, ಕೇರಳಕ್ಕೂ ಒಮಾನ್ ಬೂತಾಯಿ ಸರಬರಾಜು ಆಗುತ್ತಿದೆ. ಆದ್ರೆ, ಒಮಾನ್ ಮತ್ತು ಭಾರತ ಪಶ್ಚಿಮ ಕರಾವಳಿ ಒಂದೇ ಸಮುದ್ರದ ಎರಡು ದಡದಲ್ಲಿದೆ. ಒಂದೇ ಸಮುದ್ರದ ಎರಡು ತುದಿಯಲ್ಲಿ ಒಂದೇ ಮೀನು ಎರಡು ಆಕಾರದಲ್ಲಿ ಇರುವುದು ಸೋಜಿಗ ತಂದಿದೆ. ರುಚಿಯಲ್ಲಿ ಮಾತ್ರ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಾರೆ ಈ ಮೀನುಗಳನ್ನು ಸವಿದವರು.

ಸಮುದ್ರ ಬದಲಾದಾಗ ಮೀನಿನ ಆಕಾರ, ರುಚಿ, ಬದಲಾಗುತ್ತದೆ. ಹಾಗಾಗಿ ಅರಬ್ಬೀ ಸಮುದ್ರದ ಮೀನಿಗಿರುವ ರುಚಿ ಬಂಗಾಳಕೊಲ್ಲಿಯಲ್ಲಿ ಸಿಗುವ ಮೀನಿಗಿಲ್ಲ. ಅದಕ್ಕಾಗಿಯೇ ತಮಿಳುನಾಡು, ಆಂಧ್ರದಿಂದ ಬರುವ ಮೀನುಗಳಿಗೆ ಬೇಡಿಕೆ ಕಡಿಮೆ ಇರುತ್ತದೆ. ಆದ್ರೆ ಇದೀಗ ಕರಾವಳಿಗೆ ಬರುವ ಓಮನ್ ದೇಶದ ದೊಡ್ಡ ಗಾತ್ರದ ಬಂಗುಡೆ, ಬೂತಾಯಿ ಮೀನುಗಳಿಗೆ ಭಾರೀ ಬೇಡಿಕೆ ಹೆಚ್ಚಿದ್ದು ಖರೀದಿಸಲು ಜನ ಮುಗಿ ಬೀಳುತ್ತಿದ್ದಾರೆ.

Leave a Reply

Your email address will not be published. Required fields are marked *