Breaking
21 Sep 2026, Mon

ಮೈಸೂರಿನಲ್ಲಿ ಆಸ್ತಿಗಾಗಿ ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದ ತಮ್ಮ

ಮೈಸೂರು: ಆಸ್ತಿ ವಿಚಾರಕ್ಕೆ ಸಂಬoಧಿಸಿ ತಮ್ಮನೊರ್ವ ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿರುವ ಘಟನೆ ಮೈಸೂರು ತಾಲೂಕಿನ ಆನಂದೂರಿನಲ್ಲಿ ಸೆ.1 ರಂದು ನಡೆದಿದೆ.

ಮಹೇಶ್ ಹತ್ಯೆಯಾದ (45) ದುರ್ದೈವಿಯಾಗಿದ್ದು, ತಮ್ಮ ರವಿ (43) ಅಣ್ಣನನ್ನು ಹತ್ಯೆ ಗೈದ ಆರೋಪಿಯಾಗಿದ್ದಾನೆ.

ಘಟನೆಯಲ್ಲಿ ತಂದೆ ಕೃಷ್ಣೇಗೌಡ, ಹಾಗೂ ಅತ್ತಿಗೆ ಲಕ್ಷ್ಮೀ ಅವರ ಮೇಲೂ ಆರೋಪಿ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಲವಾಲ ಠಾಣೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *