ಉಡುಪಿ: ಕಳೆದ 11 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಗದಗ ಜಿಲ್ಲೆಯ ನರಗುಂದ ಮಾರುತಿ ನಗರದ ಸಂಜು ಪತ್ತಾರ್ ಯಾನೆ ಸಂಜು ಬಡಿಗೇರ್(36) ಎಂದು ಗುರುತಿಸಲಾಗಿದೆ.

ಬೆಳಗಾವಿಯ ಅನಗೋಳಿಯ ಅಂಬೇಡ್ಕರ್ ಗಲ್ಲಿ ಎಂಬಲ್ಲಿ ಆ.30 ರಂದು , ಖಚಿತ ಮಾಹಿತಿ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ರಾಘವೇಂದ್ರ ಮತ್ತು ಆನಂದಯ್ಯ ಅವರು ನೇತೃತ್ವದಲ್ಲಿ ವಶಕ್ಕೆ ಪಡೆದು ಬಂಧಿಸಿದ್ದಾರೆ.



