ಧರ್ಮಸ್ಥಳ: ಸೌಜನ್ಯ ಪ್ರಕರಣದ ಪ್ರತ್ಯಕ್ಷ ಸಾಕ್ಷಿ’ ಎಂದು ಹೇಳಿಕೊಳ್ಳುವ ಮಂಡ್ಯ ಮಹಿಳೆಯೊಬ್ಬರು ಎಸ್ಐಟಿಗೆ ದೂರು ನೀಡಿದ್ದಾರೆ ಅಂತ ಹೇಳಲಾಗುತ್ತಿದೆ.
ಮಂಡ್ಯ ನಿವಾಸಿಯಾಗಿರುವ ಚಿಕ್ಕಕೆಂಪಮ್ಮ ಎಂಬವರೇ ದೂರು ನೀಡಿರುವ ಮಹಿಳೆಯಾಗಿದ್ದಾರೆ. ಮಾತ್ರವಲ್ಲ ಮಹಿಳಾ ಆಯೋಗಕ್ಕೂ ಕರೆ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಮೂಲಕ ಸೌಜನ್ಯ ಸಾವಿನ ಪ್ರಕರಣ ಸಾರ್ವಜನಿಕ ವಲಯದಲ್ಲಿ ಬಹಳ ದೊಡ್ಡ ಮಟ್ಟ ಚರ್ಚೆಯನ್ನು ಹುಟ್ಟು ಹಾಕಿದೆ.

ಅಧಿಕಾರಿಗಳಿಗೆ ಚಿಕ್ಕಕೆಂಪಮ್ಮ ಒಂದು ಮಾಹಿತಿಯನ್ನು ನೀಡಿದ್ದಾರೆ ಅಂತ ಹೇಳಲಾಗುತ್ತಿದ್ದು ಧರ್ಮಸ್ಥಳದ ದೇವಸ್ಥಾನದಿಂದ ಹೊರಬಂದು ಪ್ರಕೃತಿ ಚಿಕಿತ್ಸಾಲಯದ ಕಡೆಗೆ ಹೋಗುತ್ತಿದ್ದಾಗ, ಒಂದು ಕಾರು ಬಂದು ಒಬ್ಬ ಯುವತಿಯನ್ನು ಬಲವಂತವಾಗಿ ಕಿಡ್ನ್ಯಾಪ್ ಮಾಡುವ ದೃಶ್ಯ ತಮ್ಮ ಕಣ್ಣೆದುರಿಗೇ ನಡೆದಿದೆ ಎಂದು ತಿಳಿಸಿದ್ದಾರೆ.

ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಲು ಬಯಸಿದ್ದೆ ಎಂದು ಹೇಳಿರುವ ಅವರು ಆ ಸಮಯದಲ್ಲಿ ಅದು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ. ತಾನು ನೋಡಿದ ಘಟನೆಯ ಬಗ್ಗೆ ತನಿಖೆ ಸಮಗ್ರವಾಗಿ ನಡೆಯಬೇಕು ಎಂದು ಅವರು ಎಸ್ ಐಟಿ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ
ಚಿಕ್ಕಕೆಂಪಮ್ಮ ಅವರ ಹೇಳಿಕೆಯ ಸತ್ಯಾಸತ್ಯತೆ ಮತ್ತು ಅದರಿಂದ ಬರುವ ಪುರಾವೆಗಳನ್ನು ಆಧರಿಸಿ ತನಿಖೆ ಮುಂದುವರೆಯುವ ಸಾಧ್ಯತೆ ಇದೆ.



