Breaking
23 Mar 2026, Mon

ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿ ಕಾಡಾನೆಗಳ ಪುಂಡಾಟ

ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಕಾಡಾನೆಗಳ ದಾಳಿ ಮತ್ತೆ ಮುಂದುವರೆದಿದ್ದು ಬೆಳೆಗಳು ನಾಶವಾಗಿದೆ.

ಭಾನುವಾರ ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ ಎಂದು ತಿಳಿದು ಬಂದಿದೆ. ದಿನಕೊಂದು ಕಡೆ ಸತತವಾಗಿ ಮೂರು ನಾಲ್ಕು ತಿಂಗಳುಗಳುಗಳಿಂದ ಆನೆ ದಾಳಿ ಮಾಡಿ ಕೃಷಿ ನಾಶ ಮಾಡುತ್ತಿವೆ.

ಅಡ್ತಲೆ ಯ ಕಿನಾಲ ಮೋಹನ್ ಅವರ ಆನೆ ಓಡಿಸುವ ಯಂತ್ರದ ಹತ್ತಿರ ಮಾತ್ರ ಬಾರದೆ , ತೋಟದ ಎಲ್ಲಾ ಕಡೆ ಒಡಾಡಿ ಒಂಟಿ ಸಲಗ ಬೆಳೆ ನಾಶ ಮಾಡಿದೆ. ಗುರುಚಾರ ಗಣೇಶ್ ಮಾಸ್ತರ್ ಅಡ್ತಲೆ, ಪ್ರದೀಪ್ ಅಡ್ತಲೆ, ಪ್ರಭಾಕರ ಅಡ್ತಲೆ, ಗಿರೀಶ್ ಅಡ್ತಲೆ, ಅವರ ತೋಟಗಳಿಗೆ ದಾಳಿ ನಡೆಸಿದ ಕಾಡಾನೆಗಳು ಅಡಿಕೆ, ತೆಂಗು ಬಾ ಬಾಳೆ ಇತರ ಬೆಳೆಗಳನ್ನು ನಾಶಪಡಿಸಿವೆ.

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *