Breaking
21 Mar 2026, Sat

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಸಮ್ಮೇಳನ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಸಮ್ಮೇಳನವು ಬೆಸೆಂಟ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಮ್ಮೇಳನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂಟರ ವಾಣಿ ಇದರ ಸಂಪಾದಕರಾದ ಶ್ರೀಯುತ ಪ್ರದೀಪ್ ರೈ ಐಕಳ ಭಾವ, ವಕೀಲರಾದ ಶ್ರೀಯುತ ಶೀತಲ್ ಕುಮಾರ್ ಜೈನ್ ಕಾರ್ಕಳ, ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರಾದ ಶ್ರೀಯುತ ಕೇಶವ ಬಂಗಾರ, ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕರಾದ ಶ್ರೀಯುತ ಸುವಿತ್ ಶೆಟ್ಟಿ , ಎಬಿವಿಪಿ ಮಂಗಳೂರು ಮಹಾನಗರ ಕಾರ್ಯದರ್ಶಿ ಮೋನಿಶ್ ತುಮಿನಾಡು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ನೂತನ ಮಂಗಳೂರು ಮಹಾನಗರ ಕಾರ್ಯಕಾರಣಿ ಘೋಷಿಸಲಾಯಿತು.

ಮಂಗಳೂರು ಮಹಾನಗರದ ನೂತನ ಕಾರ್ಯದರ್ಶಿಯಾಗಿ ಕುಮಾರಿ ಶ್ರೀಲಕ್ಷ್ಮೀ ಶೆಟ್ಟಿ , ಮಂಗಳೂರು ಮಹಾನಗರದ ದಕ್ಷಿಣ ವಲಯದ ನೂತನ ಕಾರ್ಯದರ್ಶಿಯಾಗಿ ಶ್ರವಣ್ ಮುಚ್ಚೂರು ಹಾಗೂಮಂಗಳೂರು ಮಹಾನಗರದ ಉತ್ತರ ವಲಯದ ನೂತನ ಕಾರ್ಯದರ್ಶಿಯಾಗಿ ಹರ್ಷಿತ್ ಆಯ್ಕೆಯಾದರು.

Leave a Reply

Your email address will not be published. Required fields are marked *