Breaking
19 Sep 2026, Sat

ಕಲ್ಲಮುಂಡ್ಕೂರಿನಲ್ಲಿ ದನ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಲ್ಲಮುಂಡ್ಕೂರ್‌ : ಇಬ್ಬರು ಮುಸುಕುಧಾರಿಗಳು ದನಗಳನ್ನು ಕದಿಯುತ್ತಿರುವು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ಘಟನೆ ಕಲ್ಲಮುಂಡ್ಕೂರಿನ ಬಾನಂಗಡಿಯ ಬಾರ್ಕ್ ಬೆಟ್ಟದ ಸಹಕಾರಿ ಸಂಘದ ಬಳಿ ಆಗಸ್ಟ್ 19 ರ ರಾತ್ರಿ ನಡೆದಿದೆ.

ಇಬ್ಬರು ವಾಹನದಲ್ಲಿ ಬಂದು ಎರಡು ದನಗಳಿಗೆ ಬಿಸ್ಕತ್ತುಗಳಂತೆ ಕಾಣುವ ವಸ್ತುವನ್ನು ನೀಡಿ ಆಮಿಷವೊಡ್ಡುತ್ತಿರುವುದನ್ನು ತೋರಿಸಲಾಗಿದೆ. ನಂತರ ನಿಧಾನವಾಗಿ ದನಗಳನ್ನು ಹಗ್ಗಗಳಿಂದ ಕಟ್ಟಿ ಹತ್ತಿರದ ಕಂಬಕ್ಕೆ ಬಿಗಿದು, ಮೂರನೇ ವ್ಯಕ್ತಿಯೊಂದಿಗೆ ಸೇರಿಕೊಂಡು, ದನಗಳನ್ನ ಗಾಡಿಗೆ ತುಂಬುವ ದೃಶ್ಯ ಸೆರೆಯಾಗಿದೆ.

ಘಟನೆಯ ನಂತರ, ಈ ಕುರಿತು ಬಲರಾಮ್ ಪ್ರಭು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *