Breaking
22 Mar 2026, Sun

ಮಂಜೇಶ್ವರ : ಎಎಸ್ಐ ನೇಣು ಬಿಗಿದು ಆತ್ಮಹತ್ಯೆ

ಮಂಜೇಶ್ವರ: ಪೊಲೀಸ್ ಠಾಣೆಯ ಎಎಸ್ಐ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆ.22ರ ಬೆಳಿಗ್ಗೆ ನಡೆದಿದೆ.

ಮೃತರನ್ನು ಕುತ್ತಿಕೋಲ್ ನಿವಾಸಿ ಮಧು (50) ಎಂದು ಗುರುತಿಸಲಾಗಿದೆ. ಇವರು ಬದಿಯಡ್ಕ , ಆದೂರು, ಕಾಸರಗೋಡು ನಗರ ಪೊಲೀಸ್ ಠಾಣೆ ಗಳಲ್ಲಿ ಸೇವೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಪೊಲೀಸ್ ಕ್ವಾಟರ್ಸ್ ನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಗೆ ಕಾರಣ ತಿಳಿದುಬಂದಿಲ್ಲ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕ್ವಾಟರ್ಸ್ ನಿಂದ ಡೆತ್ ನೋಟ್ ಲಭಿಸಿದ್ದು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *