ವಿಟ್ಲ: ಪುಣಚ ಗ್ರಾಮದ ಅಜ್ಜಿನಡ್ಕದಲ್ಲಿ ವೃದ್ಧರೊಬ್ಬರು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ಕೊಡಂಗೆ ನಿವಾಸಿ ತಿಮ್ಮಪ್ಪ ಪೂಜಾರಿ ( 70) ಎಂದು ಗುರುತಿಸಲಾಗಿದೆ.

ತಿಮ್ಮಪ್ಪ ಪೂಜಾರಿಯವರು ತನ್ನ ಸಹೋದರ ನಾರಾಯಣ ಪೂಜಾರಿಯವರ ಮನೆಯಲ್ಲಿ ವಾಸವಿದ್ದು ಆ.20 ರಂದು ಬೆಳಿಗ್ಗೆ ಮನೆಯಿಂದ ಹೊರಟು ಬಳಿಕಮನೆಗೆ ಹಿಂದಿರುಗಿ ಬಂದಿರಲಿಲ್ಲ. ನಂತರ ನೆರೆಮನೆಯವರೊಬ್ಬರು ಪಕ್ಕದ ಮನೆಯವರ ಬಾವಿಯಲ್ಲಿ ಮೃತದೇಹ ತೇಲುತ್ತಿರುವುದನ್ನು ಗಮನಿಸಿ ಸುದ್ದಿ ತಿಳಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.



