Breaking
20 Sep 2026, Sun

ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಯುವ ಸೇವಾ ಸಂಘ (ರಿ.) ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಬಂಟ್ವಾಳ: ಕನ್ಯಾನ ಗ್ರಾಮದ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಯುವ ಸೇವಾ ಸಂಘ (ರಿ.) ಬನಾರಿ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಇದರ ಅಂಗವಾಗಿ ಬೆಳಿಗ್ಗೆ ಕುಟ್ಟಿತ್ತಡ್ಕ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದಿಂದ ಗೋಪಾಲಕೃಷ್ಣ ದೇವಸ್ಥಾನಕ್ಕೆ ಮುದ್ದು ಕೃಷ್ಣ ಪುಟಾಣಿಗಳ ಶೋಭಾಯಾತ್ರೆ ನಡೆಯಿತು. ನಂತರ ದೇವಸ್ಥಾನದಲ್ಲಿ ನಡೆದ ಕ್ರೀಡಾಕೂಟದ ಬಹುಮಾನ ವಿತರಣೆ, ಶ್ರೀ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ರಾತ್ರಿ ಶ್ರೀ ದೇವರಿಗೆ ರಂಗ ಪೂಜೆ ನಡೆಯಿತು.

Leave a Reply

Your email address will not be published. Required fields are marked *