ಬಂಟ್ವಾಳ: ಸಜೀಪ ಗುತ್ತು ಶ್ರೀ ನಾಗಬನದಲ್ಲಿ ಸಪರಿವಾರ ಸಹಿತ ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ ನಾಗ ತಂಬಿಲ ಸೇವೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ಈ ವೇಳೆ ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಉಪಸ್ಥಿತರಿದ್ದರು.

ಊರವರು ಹಾಗೂ ಕುಟುಂಬದವರು ಶ್ರೀ ನಾಗ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.




