Breaking
12 May 2026, Tue

ಬೆಳ್ತಂಗಡಿಯ ಪಶು ಆಸ್ಪತ್ರೆಯಲ್ಲಿ 2024-25 ನೇ ಸಾಲಿನ ಉಚಿತವಾಗಿ ನಾಟಿಕೋಳಿ ಮರಿಗಳ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ, ಹಾಗೂ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ( ನಿ.) ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನಲ್ಲಿ ಅರ್ಹ ಗ್ರಾಮೀಣ ರೈತ ಮಹಿಳಾ ಪಲಾನುಭವಿಗಳಿಗೆ ಉಚಿತವಾಗಿ ನಾಟಿಕೋಳಿ ಮರಿಗಳ ವಿತರಣೆ ಬೆಳ್ತಂಗಡಿಯ ಪಶು ಆಸ್ಪತ್ರೆಯಲ್ಲಿ ನಡೆಯಿತು.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ನೇತೃತ್ವದಲ್ಲಿ ನಾಟಿಕೋಳಿ ಮರಿಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ತಲಾ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮದಲ್ಲಿ ತಾಲೂಕಿನ ಪರಿಶಿಷ್ಟ ಪಂಗಡದ-50, ಪರಿಶಿಷ್ಟ ಜಾತಿಯ-4, ಸಾಮಾನ್ಯ ವರ್ಗದ-6 ಒಟ್ಟು ಸುಮಾರು 60 ಅರ್ಹ ಮಹಿಳಾ ರೈತ ಫಲಾನುಭವಿಗಳಿಗೆ 1200 ನಾಟಿಕೋಳಿ ಮರಿಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *