Breaking
23 Mar 2026, Mon

ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ ಸವಾರ ಸಾವು

ಮಂಗಳೂರು : ತೊಕ್ಕೊಟ್ಟು-ಉಳ್ಳಾಲ ರಸ್ತೆಯ ಸುಂದರಿಬಾಗ್ ಎಂಬಲ್ಲಿ ಸ್ಕೂಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಾವನಪ್ಪಿರುವ ಘಟನೆ ಆಗಸ್ಟ್ 7ರಂದು ನಡೆದಿದೆ.

ಮೃತಪಟ್ಟವರು ಕೋಟೆಪುರ ನಿವಾಸಿ ಮುಕ್ಕಚ್ಚೇರಿಯಲ್ಲಿ ನೆಲೆಸಿರುವ ಇಬ್ರಾಹಿಂ (47) ಯಾನೆ ಕಮಾಲ್ ಎಂದು ಗುರುತಿಸಲಾಗಿದೆ.

ಮಂಗಳೂರು ಧಕ್ಕೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದ ಇಬ್ರಾಹಿಂ ಆ.07 ರಂದು ಸಂಜೆ ವೇಳೆ ತೊಕ್ಕೊಟ್ಟು ಕಡೆಯಿಂದ ಮನೆ ಕಡೆಗೆ ಸ್ಕೂಟರ್‌ ನಲ್ಲಿ ಪುತ್ರನನ್ನು ಕುಳ್ಳಿರಿಸಿ ತೆರಳುತ್ತಿದ್ದ ವೇಳೆ, ಸ್ಕೂಟರ್ ನ ನಿಯಂತ್ರಣ ತಪ್ಪಿ ವಿದ್ಯುತ್ ಕಂಭಕ್ಕೆ ಢಿಕ್ಕಿ ಹೊಡೆದಿದ್ದು, ಸ್ಕೂಟರ್ ಸವಾರ ಇಬ್ರಾಹಿಂ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *