Breaking
19 Sep 2026, Sat

ಹವಾಮಾನ ಆಧಾರಿತ ಬೆಳೆ ವಿಮೆ ಆಗಸ್ಟ್ 30 ವರೆಗೆ ದಿನಾಂಕ ವಿಸ್ತರಣೆ

ಸಿದ್ಧಕಟ್ಟೆ: 2025 – 26 ನೇ ಸಾಲಿನ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಕೆ ಮತ್ತು ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆಯ ಪ್ರಿಮಿಯಂ ಪಾವತಿಸುವ ಅ. 30 ರ ತನಕ ವಿಸ್ತರಣೆ ಮಾಡಿ ತೋಟಗಾರಿಕೆ ಇಲಾಖೆ ಆದೇಶ ಹೊರಡಿಸಿದ್ದು ಬೆಳೆ ವಿಮೆ ಪ್ರಿಮಿಯಂ ಪಾವತಿ ಮಾಡದ ರೈತರಿಗೆ ಅವಕಾಶ ಕಲ್ಪಿಕೊಡಲಾಗಿದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ವಿಮೆ ಬಗ್ಗೆಗಿನ ಪ್ರಿಮಿಯಂ ಪಾವತಿಸಲು ಬಾಕಿ ಉಳಿದಿರುವ ರೈತ ಬಾಂಧವರು ವಿಮೆ ಪ್ರಿಮಿಯಂ ಕಂತನ್ನು ಇದೇ ತಿಂಗಳು ಆಗಸ್ಟ್ 30 ಒಳಗೆ ಸಂಬಂಧ ಪಟ್ಟ ತಮ್ಮ ಕಾರ್ಯ ವ್ಯಾಪ್ತಿಯ ಪ್ರಾರ್ಥಮಿಕ ಸಹಕಾರ ಸಂಘ ಗಳಲ್ಲಿ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಲು ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆ ಮೂಲಕಾ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *