ಬಂಟ್ವಾಳ: ತಾಲೂಕಿನ ನಾವೂರು ಗ್ರಾಮ ಸಿಂತಾನಿಕಟ್ಟೆ ನಿವಾಸಿ ಮೀನಾಕ್ಷಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗೆ ತುಡರ್ ಸೇವಾ ಟ್ರಸ್ಟ್ (ರಿ.) 108ನೇ ಸೇವಾ ಯೋಜನೆ ಬಂಟ್ವಾಳ ಸಂಸ್ಥೆಯ ವತಿಯಿಂದ ರೂ. 15,000 ಸಹಾಯಧನದ ಚೆಕ್ ನ್ನು ಟ್ರಸ್ಟ್ ನ ಸೇವಾ ಮಾಣಿಕ್ಯರ ಸಮ್ಮುಖದಲ್ಲಿ ಬಿ.ಸಿ ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಜು.03 ರಂದು ಹಸ್ತಾಂತರಿಸಲಾಯಿತು.

ಈ ಯೋಜನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸೇವಾ ಮಾಣಿಕ್ಯರಿಗೂ ಹೃದಯಸ್ಪರ್ಶಿ ಧನ್ಯವಾದಗಳು..





