Breaking
12 May 2026, Tue

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಳ್ತಿಲ ಕಂಟಿಕದಲ್ಲಿ ಅಡಿಕೆ ತೋಟ ರಚನೆ

ಕಲ್ಲಡ್ಕ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಟಿಕದಲ್ಲಿ ಸತ್ಯಸಾಯಿ ಬಾಬಾ ದಕ್ಷಿಣಕನ್ನಡದ ಸೇವಾ ಸಂಸ್ಥೆಗಳ ವತಿಯಿಂದ ಸತ್ಯಸಾಯಿ ಬಾಬಾ ಅವರ ಜನ್ಮ ಶತಾಬ್ದಿಯ ಪ್ರಯುಕ್ತ “ಪ್ರೇಮ ತರು” ಎನ್ನುವ ಗಿಡ ನೆಡುವ ಕಾರ್ಯಕ್ರಮ ಮಂಗಳವಾರ ಜರುಗಿತು.

ಶಾಲೆಯ 75 ಸೆನ್ಸ್ ಜಾಗದಲ್ಲಿ ಸುಮಾರು 170 ಅಡಿಕೆ ಗಿಡಗಳು 10 ತೆಂಗಿನ ಗಿಡ, 25 ಮಿಕ್ಕಿ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಸತ್ಯಸಾಯಿ ಸಂಸ್ಥೆಗಳ ಕರ್ನಾಟಕ ರಾಜ್ಯ ಉತ್ತರ ವಿಭಾಗದ ರಾಜ್ಯ ಮಹಿಳಾ ಸೇವಾ ಸಂಯೋಜಕ ಶ್ರೀಮತಿ ಪ್ರಿಯಾ ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಟ್ಟು ಬಳಿಕ ಮಾತನಾಡಿ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಾಬ್ದಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಗಿಡ ನಾಟಿ ಮಾಡಲಾಗುತ್ತಿದ್ದು, ಇದರ ಪೋಷಣೆಯ ಜವಾಬ್ದಾರಿ ಶಾಲಾಭಿವೃದ್ಧಿ ಸಮಿತಿ ಹಾಗೂ ಊರ ಶಾಲಾಭಿಮಾನಿಗಳಿಗೆ ಸೇರಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಸೇವಾ ಸಂಸ್ಥೆಯ ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಮೂಕಾಂಬಿಕಾ ಎನ್ ರಾವ್, ಜಿಲ್ಲಾ ಮಹಿಳಾ ಸೇವಾ ಸಂಯೋಜಕಿ ಶ್ರೀಮತಿ ಶಾಂತಿ ಭಟ್, ಜಿಲ್ಲಾ ಆಧ್ಯಾತ್ಮಿಕ ಸಂಯೋಜಕಿ ಶ್ರೀಮತಿ ಮುಕ್ತಾಕಿಣಿ , ಯುವ ಸಂಯೋಜಕಿ ಶ್ರೀಮತಿ ವೀಣಾ ಲಕ್ಷ್ಮಿ ಭಟ್ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್, ಜಿಲ್ಲಾ ಉಪಾಧ್ಯಕ್ಷ ಮಹಾಬಲೇಶ್ವರ ಭಟ, ರಾಜ್ಯ ಸೇವಾ ಸಯೋಜಕರಾದ ಶ್ರೀ ಚಂದ್ರಶೇಖರ ನಾಯಕ್, ಜಿಲ್ಲಾ ಪುರುಷ ಸೇವಾದಳ ಸಂಯೋಜಕರಾದ ಶ್ರೀ ದುರ್ಗಾ ಪ್ರಸಾದ್ , ಪುತ್ತೂರು ಬಂಟ್ವಾಳ ಮುಡಿಪು ಮತ್ತು ಮಂಗಳೂರು ಸೇವಾ ಸಮಿತಿಯ ಸೇವಾ ದಳದ ಸದಸ್ಯರುಗಳು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ , ಉಪಾಧ್ಯಕ್ಷೆ ಲಕ್ಷ್ಮಿ, ಬಿ ಆರ್ ಸಿ ಸುರೇಖ, ಗ್ರಾಮ ಪಂಚಾಯತ್ ಸದ್ಯಸ್ಯ ರಾಜೀವ, ಮಾಜಿ ಎಸ್. ಡಿ. ಎಂ. ಸಿ ಅಧ್ಯಕ್ಷ ರಾಜೇಶ, ಹಿರಿಯರಾದ ಜನಾರ್ಧನ, ಕಲ್ಲಡ್ಕ ಶೌರ್ಯ ವೀಪತು ಘಟಕ ಸಂಯೋಜಕಿ ವಿದ್ಯಾ, ಸದಸ್ಯರುಗಳಾದ ತುಳಸಿ, ಸೌಮ್ಯ, ಧನಂಜಯ, ಚಿನ್ನಾ, ಶಾಲೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ಮಕ್ಕಳ ಪೋಷಕರು, ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚೇತನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *