Breaking
3 Jul 2026, Fri

ಆಟಿದ ಕೂಟ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀ ಕೃಷ್ಣನಿಗೆ ಅವಮಾನ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರಿನ: ತಾಲೂಕಿನ ಪಚ್ಚನಾಡಿ ಬಂದಲೆ ಎಂಬಲ್ಲಿನ ಶ್ರೀಮಂತ ರಾಜಗುಳಿಗ ಕ್ಷೇತ್ರದಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಹಿಂದುಗಳ ಧಾರ್ಮಿಕ ಭಾವನೆ, ಭಗವಾನ್ ಶ್ರೀ ಕೃಷ್ಣನಿಗೆ ಅಪಹಸ್ಯ ಮಾಡಿದ್ದರೆಂದು ಆರೋಪಿಸಿ ರವಿ ರಾಮಕುಂಜ’ ಎಂಬವರ ವಿರುದ್ದ ಹಿಂದೂ ಸಂಘಟನೆಗಳ ಮುಖಂಡರು ದೂರು ದಾಖಲಿಸಿದ್ದಾರೆ.

ಶ್ರೀ ಕೃಷ್ಣನ ವೇಷಧಾರಿಯಾದ ‘ರವಿ ರಾಮಕುಂಜ’ ಎಂಬವರು ಹಿಂದೂಗಳ ಆರಾಧ್ಯ ದೇವರಾದ ಶ್ರೀ ಕೃಷ್ಣ ಪರಮಾತ್ಮನ ವೇಷ ಧರಿಸಿಕೊಂಡು ಅಶ್ಲೀಲ ಭಂಗಿ ಮತ್ತು ಅಶ್ಲೀಲ ಪದ ಕೊಳಲು ಊದುವಾಗ ಶ್ರೀ ಕೃಷ್ಣನ ಇನ್ನೊಂದು ಹೆಸರಾದ ಮುರಾರಿ ಬಗ್ಗೆ ‘ಆಯೆ ಸೈತೆ’ ಅಲ್ಲದೆ ಕೃಷ್ಣ ವೇಶಧಾರಿ ಹಾಲಿಂಗನ ಮಾಡುವುದು ಅಸಂಬದ್ಧ ಶಬ್ದಗಳೊಂದಿಗೆ ಅನಾಗರಿಕವಾಗಿ ನಟಿಸಿದ್ದು ವರ್ತಿಸಿದ್ದು ಇದು ಹಿಂದುಗಳ ಧಾರ್ಮಿಕ ಭಾವನೆಗೆ ತೀವ್ರಗಾಸಿ ಉಂಟುಮಾಡುತ್ತದೆ. ಧಾರ್ಮಿಕ ನಂಬಿಕೆ ಮತ್ತು ಆರಾಧನೆಗೆ ಧಕ್ಕೆಯಾಗದಂತೆ ಕಾನೂನಿನಲ್ಲಿ ಉಲ್ಲೇಖವಿದ್ದರೂ ಈ ರೀತಿಯ ಘಟನೆಗಳು ಮರುಕಳಿಸುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿ ಸಮುದಾಯದ ಒಳಗೆ ಗಲಭೆಗಳು ಆಗುವ ಸಾಧ್ಯತೆ ಇರುತ್ತದೆ ಆದ್ದರಿಂದ ತಾವುಗಳು ಸದ್ರಿ ಕಲಾವಿದರಾದ ‘ಶ್ರೀ. ರವಿ ರಾಮ ಕುಂಜ’ ಮತ್ತು ನಿರ್ದೇಶಕರಾದ ‘ಶ್ರೀ. ಪುಷ್ಪರಾಜ್’ ಹಾಗು ಕಾರ್ಯಕ್ರಮದ ಆಯೋಜಕರಾದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ಮನವಿ ಮಾಡುತ್ತೇವೆಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಳ್ತಂಗಡಿಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಉದಯ ಕುಮಾರ್ ಬಿ.ಕೆ. ವಿಶ್ವ ಹಿಂದು ಪರಿಷತ್ತು ಬೆಳ್ತಂಗಡಿ ಪ್ರಖಂಡ ಸೇವಾಪ್ರಮುಖ್ ಶ್ರೀ ಮೋಹನ್ ಬೆಳ್ತಂಗಡಿ, ಸಾಮಾಜಿಕ ಹೋರಾಟಗಾರರಾದ ಕೇಶವ ಗೌಡ, ಜಗದೀಶ್, ಮೋಹನ್ ಬಂಗೇರ, ಶೇಖರ್ ಕುಲಾಲ್ , ಕಮಲಾಕ್ಷ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *