Breaking
19 Sep 2026, Sat

ಭಾರಿ ಮಳೆಗೆ ಉಕ್ಕಿ ಹರಿದ ನೀರು: ದಡ್ಡು ಪ್ರದೇಶದ ತೋಟ ಹಾಗೂ ಕಾರಿಗೆ ಹಾನಿ

ಬೆಳ್ತಂಗಡಿ: ಕಳೆದ ದಿನ ಸುರಿದ ಭಾರಿ ಮಳೆಯಿಂದಾಗಿ ಪೆರ್ನಾಳ್ ಕೆರೆಯಿಂದ ಹರಿಯುವ ಹಳ್ಳದ ನೀರು ಉಕ್ಕಿ ಹರಿದ ಪರಿಣಾಮ ತೋಟತ್ತಾಡಿ ಗ್ರಾಮದ ದಡ್ಡು ಪ್ರದೇಶದ ತೋಟ ಹಾಗೂ ಕಾರಿನೊಳಗೆ ನೀರು ನುಗ್ಗಿ ಹಾನಿಯಾಗಿರುವ ಘಟನೆ ನಡೆದಿದೆ.

ತೋಟತ್ತಾಡಿ ಸರಕಾರಿ ಶಾಲೆಯಿಂದ ಮುಂದೆ ದಡ್ಡು ಮೂಲಕ ಬಸದಿಗೆ ಹೋಗುವ ಒಳ ರಸ್ತೆಯಲ್ಲಿ , ನಿಲ್ಲಿಸಿದ್ದ ಮನೆಯವರ ಕಾರು ತೇಲಿ ಹೋಗುವ ಸ್ಥಿತಿ ಉಂಟಾಗಿದ್ದು, ಈ ಪರಿಸ್ಥಿತಿಯನ್ನು ಗಮನಿಸಿದ ಮನೆಯವರು ಕಾರನ್ನು ಹಗ್ಗದಲ್ಲಿ ಕಟ್ಟಿ ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *