Breaking
25 Mar 2026, Wed

ಹಾಸನದ ಐತಿಹಾಸಿಕ ಮಂಜರಾಬಾದ್ ಕೋಟೆಯ ಒಂದು ಭಾಗ ಕುಸಿತ

ಹಾಸನ: ಭಾರೀ ಮಳೆಯ ಕಾರಣದಿಂದ ಟಿಪ್ಪು ನಿರ್ಮಿಸಿರುವ ಹಾಸನದ ಐತಿಹಾಸಿಕ ಮಂಜರಾಬಾದ್ ಕೋಟೆಯ ಒಂದು ಭಾಗ ಶನಿವಾರ ಮಧ್ಯರಾತ್ರಿ ವೇಳೆ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.

ಈ ಕೋಟೆ ನಕ್ಷತ್ರ ಆಕಾರವನ್ನು ಹೊಂದಿದ್ದು ಪ್ರತಿದಿನ ನೂರಾರು ಪ್ರವಾಸಿಗರು ಕೋಟೆಗೆ ಭೇಟಿ ನೀಡುತ್ತಾರೆ.

ಸಕಲೇಶಪುರ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡಾಣಿ ಗುಡ್ಡದ ಮೇಲೆ, ಸಮುದ್ರ ಮಟ್ಟದಿಂದ 988 ಮೀಟರ್ ಎತ್ತರದಲ್ಲಿ ಈ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. 3393 ಅಡಿ ಎತ್ತರದಲ್ಲಿ 252 ಮೆಟ್ಟಿಲುಗಳನ್ನು ಏರಿದರೆ ತಲುಪಬಹುದಾದ ಈ ಕೋಟೆಯ ವಿನ್ಯಾಸವು ವಿಶಿಷ್ಟ ರಕ್ಷಣಾ ತಂತ್ರವನ್ನು ಹೊಂದಿದೆ.

1956ರಿಂದ ಈ ಕೋಟೆಯ ಸಂರಕ್ಷಣೆಯ ಜವಾಬ್ದಾರಿಯನ್ನು ಪುರಾತತ್ವ ಇಲಾಖೆ ವಹಿಸಿಕೊಂಡಿದೆ ಎಂಬ ಮಾಹಿತಿ ಇದೆ.

Leave a Reply

Your email address will not be published. Required fields are marked *