Breaking
19 Sep 2026, Sat

ಚಲಿಸುತ್ತಿದ್ದ ಸ್ಕೂಟರ್‌ನಿಂದ ಬಿದ್ದು ಖಾಸಗಿ ಬಸ್ ಚಕ್ರ ಹರಿದು ಮಹಿಳೆ ಸಾವು

ಕುಂದಾಪುರ: ಚಲಿಸುತ್ತಿದ್ದ ಸ್ಕೂಟರ್‌ನಿಂದ ಬಿದ್ದು ಖಾಸಗಿ ಬಸ್ ಚಕ್ರ ಹರಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ-66 ರ ಸಂತೆ ಮಾರುಕಟ್ಟೆ ಬಳಿಯ ಭತ್ರಾಹದಿ ಕ್ರಾಸ್ ಬಳಿ ಜುಲೈ 03 ರಂದು ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಕುಂದಾಪುರ ತಾಲೂಕಿನ ಕೊರ್ಗಿ ನಿವಾಸಿ ಹಾಗೂ ಮಂಜ ಅವರ ಪತ್ನಿ ಜಲಜ (64) ಎಂದು ಗುರುತಿಸಲಾಗಿದೆ.

ಅನಗಳ್ಳಿಯಲ್ಲಿರುವ ತಮ್ಮ ಅಳಿಯನ ಮನೆಯಿಂದ ಪತ್ನಿಯ ಸ್ಕೂಟರನಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದ ವೇಳೆ ಭಟ್ಕಳದಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಮಹಾವೀರ್ ಖಾಸಗಿ ಬಸ್ ಸ್ಕೂಟರನ್ನು ಓವರ್‌ಟೇಕ್ ಮಾಡಿದ ಸಂದರ್ಭ ಜಲಜಾ ರಸ್ತೆಗೆ ಬಿದ್ದರು. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್‌ನ ಹಿಂದಿನ ಚಕ್ರ ಅವರ ಕುತ್ತಿಗೆಯ ಮೇಲೆ ಹರಿದ ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *