ಸಿದ್ಧಕಟ್ಟೆ :ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆ ಶ್ರೀ ಗುಣಪಲ ಪರಾಡ್ಕರ್ ಎಲ್.ಐ.ಸಿ ಪ್ರತಿನಿಧಿಯವರ ನೇತೃತ್ವದಲ್ಲಿ ಗ್ರಾಹಕರ ಸಮಾವೇಶ ಫಲ್ಗುಣಿ ಕಂಪ್ಲೆಕ್ಸ್ ಸಿದ್ಧಕಟ್ಟೆಯಲ್ಲಿ 20 ಸೆಪ್ಟೆಂಬರ್ 2024ನೇ ಶುಕ್ರವಾರ ನೆರವೇರಿತು.
ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀಯುತ ರತ್ನಾಕುಮಾರ್ ಚೌಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಮುಖ್ಯ ಅತಿಥಿಗಳಾಗಿ ಶ್ರೀಯುತ ಕೆ.ಸತೀಶ್ ಕುಮಾರ್ ಮುಖ್ಯಪ್ರಬಂಧಕರು ಎಲ್. ಐ.ಸಿ ಆಫ್ ಇಂಡಿಯಾ ಬಂಟ್ವಾಳ ಶಾಖೆ, ಶ್ರೀಯುತ ದುರ್ಗಾರಾಮ್ ಶೆಣೈ ಪ್ರಾಡಕ್ಟ್ ಮ್ಯಾನೇಜರ್ ಎಲ್.ಐ.ಸಿ ಆಫ್ ಇಂಡಿಯಾ ಉಡುಪಿ ವಿಭಾಗ, ಶ್ರೀಯುತ ಪ್ರಭಾಕರ್ ಐಗಳ್ ಪ್ರಧಾನ ಅರ್ಚಕರು ವೀರಭದ್ರ ಮಹಮ್ಮಾಯಿ ದೇವಸ್ಥಾನ ಸಂಗಬೆಟ್ಟು, ಶ್ರೀಯುತ ರೋನಾಲ್ಡ್ ಮೋರಸ್ ರೊಮೆಲ್ ಫೈನಾನ್ಸ್ ಸಿದ್ಧಕಟ್ಟೆ ಉಪಸ್ಥಿತರಿದ್ದರು. ಮಧ್ವರಾಜ್.ಬಿ.ಕಲ್ಮಾಡಿ ಅಭಿವೃದ್ಧಿ ಅಧಿಕಾರಿ ಎಲ್.ಐ.ಸಿ ಆಫ್ ಇಂಡಿಯಾ ಬಂಟ್ವಾಳ ಶಾಖೆ ಇವರು ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.