ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ನೀರು ತುಂಬಿದ್ದ ಪರಿಣಾಮ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ತುಂಬೆ ನಿವಾಸಿ ಅಜಿತ್ ಹಾಗೂ ಆತನ ಸಹ ಸವಾರ ಗಾಯಗೊಂಡಿರುವವರು.

ದಾಸಕೋಡಿ ಸಂಬಂಧಿಕರ ಮನೆಗೆ ಹೋಗಿ ವಾಪಾಸು ತುಂಬೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ವಾಹನಗಳ ಓಡಾಟ ತಡೆಗೊಳಿಸಲು ಕಂಪೆನಿಯು ಇಡಲಾಗಿದ್ದ ತಡೆಬೇಲಿಗೆ ಬೈಕ್ ಢಿಕ್ಕಿಯಾಗಿದ್ದು ರಾತ್ರಿ ಹೊತ್ತಿನಲ್ಲಿ ವಾಹನ ಚಾಲಕರಿಗೆ ಕಾಣಲು ರಿಫ್ಲೆಕ್ಟರ್ ಅಳವಡಿಸದೆ ಇದ್ದುದಕ್ಕೆ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.



