ಮಂಗಳೂರು: ಎಡಪದವು ಮಹಾ ಶಕ್ತಿ ಕೇಂದ್ರ ಕಚೇರಿ ಕುಪ್ಪೆಪದವಿನಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮುತ್ತೂರು ಗ್ರಾಮ ಪಂಚಾಯಿತಿಯ ಕೊಳವೂರು ಮತ್ತು ಮುತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಪ್ರಶಿಕ್ಷಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಹಿರಿಯ ಕಾರ್ಯಕರ್ತರಾದ ರಘು ಎಂ ಅಗರಿ ನೆರೆವೇರಿಸಿದರು . ಬಿಜೆಪಿ ಹಿರಿಯ ಕಾರ್ಯಕರ್ತರಾದ ಶರತ್ ಕುಮಾರ್ ಶೆಟ್ಟಿ ಕಡೆಗುಂಡ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು .

ಈ ವೇಳೆ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಮಾತನಾಡಿ ಪಕ್ಷದ ಹಿತದೃಷ್ಟಿಯಿಂದ ಗ್ರಾಮೀಣ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ಬಹಳ ಪ್ರಾಮುಖ್ಯ ಎಂದು ಹೇಳಿದರು . ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ , ಮಾಜಿ ಜಿಲ್ಲಾ ಸದಸ್ಯರಾದ ಜನಾರ್ಧನ ಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ ಅಭ್ಯಾಸ ವರ್ಗವನ್ನು ನಡೆಸಿಕೊಟ್ಟರು .


ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಇವರು ಮಾತನಾಡಿ ಈ ಭಾಗದಲ್ಲಿ ಪಕ್ಷವು ತುಂಬಾ ಬಲಿಷ್ಠವಾಗಿದೆ ಪಕ್ಷವನ್ನು ಕಾರ್ಯಕರ್ತರು ಮುಖಂಡರು ಸೇರಿ ಇನ್ನಷ್ಟು ಬಲಿಷ್ಠಗೊಳಿಸಬೇಕು ಬೂತ್ ಮಟ್ಟದ ಕಾರ್ಯಕರ್ತರು ಕೇಂದ್ರ ಸರ್ಕಾರದ ಯೋಜನೆಯನ್ನು ಪ್ರತಿ ಮನೆಗೆ ತಲುಪಿಸಬೇಕು ಬೂತಿನ ಹನ್ನೆರಡು ಜನ ಪಧಾದಿಕಾರಿಗಳು ಹಾಗೂ ಸದಸ್ಯರು ಎಲ್ಲಾ ಕಾರ್ಯಕರ್ತರೊಂದಿಗೆ ಸೇರಿ ಪ್ರತಿ ತಿಂಗಳಲ್ಲಿ ಬೂತ್ ಮೀಟಿಂಗ್ ನಡೆಸಬೇಕು ಎಂದರು.

ಈ ಸಂಧರ್ಭದಲ್ಲಿ ಉತ್ತರ ಮಂಡಲದ ಉಪಾಧ್ಯಕ್ಷರಾದ ಅಮೃತ್ ಲಾಲ್ ಡಿಸೋಜ , ಮುತ್ತೂರು ಗ್ರಾಮ ಪಂಚಾಯತ್ ನ ಪ್ರಭಾರಿ ಸೋಹನ್ ಅತಿಕಾರಿ , ಎಡಪದವು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲ್ಯಾನ್ , ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಶ್ಮಾ , ಸದಸ್ಯರುಗಳಾದ ಜಗದೀಶ್ ದುರ್ಗಾಕೋಡಿ , ಪುಷ್ಪಾ ನಾಯ್ಕ್ , ತಾರನಾಥ್ ಕುಲಾಲ್ , ಶಶಿಕಲಾ ಗಿರೀಶ್ , ಮಂಗಳೂರು ಉತ್ತರ ಮಂಡಲದ ಉಪಾಧ್ಯಕ್ಷರಾದ ಸಂತೋಷ್ ಕಂಗಿನಡಿ , ಜಿಲ್ಲಾ ಎಸ್ ಸಿ ಮೋರ್ಚಾದ ಉಪಾಧ್ಯಕ್ಷರಾದ ಹೊನ್ನಯ ಅಟ್ಟೆಪದವು , ಪ್ರಮುಖರಾದ ಶೇಖರ್ ನೇಲಚ್ಚಿಲ್ , ಸದಾನಂದ ಶೆಟ್ಟಿ , ಅಜಯ್ ಅಮೀನ್ , ಮುತ್ತೂರು ಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್ , ಬೂತ್ ಅಧ್ಯಕ್ಷರುಗಳಾದ ತಾರನಾಥ್ ಉಗ್ರಾಯಿ , ದೀಕ್ಷಿತ್ ಆಚಾರ್ಯ , ಸಚಿನ್ ಶೆಟ್ಟಿ , ವಿನೋದ್ ತಾರೆಮರ್ , ಬೂತ್ ನ ಕಾರ್ಯದರ್ಶಿಗಳು ಪಾದಾಧಿಕಾರಿಗಳು , ಕಾರ್ಯಕರ್ತರು ಉಪಸ್ಥಿತರಿದ್ದರು .
ಕೊಳವೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಸತೀಶ್ ಪೂಜಾರಿ ಬಳ್ಳಾಜೆ ಸ್ವಾಗತಿಸಿ, ಎಸ್ ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಗಣೇಶ್ ಪಾಕಜೆ ವಂದಿಸಿದರು .


