ಬೆಳ್ತಂಗಡಿ: ಶಾಲಾ ಮಕ್ಕಳು ಬಸ್ ಗಾಗಿ ಕಾಯುತ್ತಿದ್ದ ವೇಳೆ ಕಾಡಾನೆಯೊಂದು ಮಕ್ಕಳತ್ತ ನುಗ್ಗಿ ಬಂದ ಘಟನೆ ಬೆಳ್ತಂಗಡಿ ತಾಲೂಕಿನ ಬೊಳಿಯರ್ ನಲ್ಲಿ ನಡೆದಿದೆ.

ಈ ವೇಳೆ ಭಯಭೀತರಾದ ಮಕ್ಕಳು ಸ್ಥಳೀಯ ಅಂಗಡಿಯೊಳಗೆ ಹೋಗಿ ಬಚಾವ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಎರಡು ವಾರದ ಹಿಂದೆಯಷ್ಟೇ ತಾಲೂಕಿನ ಕೊಕ್ಕಡದಲ್ಲಿ ವ್ಯಕ್ತಿ ಓರ್ವನ ಮೇಲೆ ದಾಳಿ ಮಾಡಿತ್ತು.

ಕಾಡಾನೆ ಮತ್ತೆ ಮತ್ತೆ ಈ ಭಾಗದಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.


