ಬಂಟ್ವಾಳ : ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ದಿಯಾಗಿರುವ ಯಕ್ಷಗಾನ ಕಲೆಯಲ್ಲಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿವಿಧ ಮೇಳಗಳಲ್ಲಿ ತಿರುಗಾಟ ನಡೆಸಿ , ಬಣ್ಣದ ವೇಷದಲ್ಲಿ ತನ್ನದೇ ಶೈಲಿಯಲ್ಲಿ ಯಕ್ಷ ರಂಗದಲ್ಲಿ ರಂಗು ಮೂಡಿಸಿದ ಹಾಗೂ ಪರಂಪರೆಯ ಬಣ್ಣದ ವೇಷದಲ್ಲಿ ಸಿದ್ದ ಹಸ್ತರಾಗಿದ್ದುಕೊಂಡು , ಪುಸಕ್ತ ಬಣ್ಣದ ವೇಷದಲ್ಲಿ ಅಗ್ರಗಣ್ಯರಾಗಿ ಗುರುತಿಸಿಕೊಂಡಿರುವ ಯಕ್ಷಗಾನದ ಮೇರು ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ರವರ ಅಗಲುವಿಕೆಯಿಂದ ಒಬ್ಬ ಉತ್ತಮ ಯಕ್ಷಗಾನ ಕಲಾವಿದನನ್ನು ಕಳೆದುಕೊಂಡಿದ್ದು ಯಕ್ಷಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ದಕ್ಷಿಣಕನ್ನಡ ಸಂಸದರಾದ ಕ್ಯಾ .ಬ್ರಿಜೇಶ್ ಚೌಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ಯಕ್ಷಗಾನ ಕ್ಷೇತ್ರದಲ್ಲಿ ಸಿದ್ದಕಟ್ಟೆ ಹೆಸರನ್ನು ದೇಶ , ವಿದೇಶಗಳಲ್ಲಿ ಪಸರಿಸಿದ ದಿವಂಗತ ಚೆನ್ನಪ್ಪ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿರವರೊಂದಿಗೆ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ರವರ ಕಲಾಸಾಧನೆ ಸಹ ಅವಿಸ್ಮರಣೀಯವಾಗಿದೆ .ಶೆಟ್ಟಿಗಾರ್ ನಿಧಾನಕ್ಕೆ ಈ ಮೂಲಕ ಸಂತಾಪ ವ್ಯಕ್ತಪಡಿಸುತ್ತಾ ಮೃತರ ಕುಟುಂಬ ವರ್ಗದವರಿಗೆಲ್ಲರಿಗೂ ಅಗಲಿದ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ.



