Breaking
14 Jul 2026, Tue

ಬಂಟ್ವಾಳ: ಹಿರಿಯ ರಂಗಭೂಮಿ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ ನಿಧನ

ಬಂಟ್ವಾಳ: ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ತುಳು ರಂಗಭೂಮಿ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ (68) ಅವರು ಇಂದು (ಜು.23) ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಕಳೆದ ಹಲವು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಮಂಗಳೂರಿನ‌ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ‌ ಕಳೆದ 20 ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು. ತುಳು ರಂಗಭೂಮಿಯಲ್ಲಿ ಹೊಸ ಇತಿಹಾಸ ಬರೆದ ಶಿವದೂತೆ ಗುಳಿಗೆ ನಾಟಕದಲ್ಲಿ ಭೀಮಾರಾವ್ ಪಾತ್ರದಲ್ಲಿ ಮಿಂಚಿದ್ದರು.

ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಶಿವಾಜಿ ಮೊದಲಾದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕಲ್ಲಡ್ಕ ಶಾರದೋತ್ಸವ, ಸರಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು.
ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *