ವೀರಕಂಭ : ಕುಮೇರು ಕಾಲು ಸಂಕದ ತಡೆಗೋಡೆ ಕುಸಿತ : ತುರ್ತು ದುರಸ್ತಿಗೆ ಒತ್ತಾಯ

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ಕುಮೇರು ಎಂಬಲ್ಲಿನ ಕಾಲು ಸಂಕದ ಬದಿಗೆ ಕಟ್ಟಿದ ತಡೆಗಡೆಯು ವಿಪರೀತ ಮಳೆಗೆ ಜರಿದಿದ್ದು ಅಪಾಯದ ಸ್ಥಿತಿಯಲ್ಲಿದೆ.

ಈ ದಾರಿಯಲ್ಲಿ ವೀರಕಂಭದಿಂದ ಕುಮೇರು, ಕೆಮ್ಮಟೆ, ಲಾಡ, ಸಿಂಗೇರಿ,, ಕಿನ್ನಿ ಮೂಲೆ, ಗುಡ್ಡೆ ತೋಟ ಪ್ರದೇಶದ ನಿವಾಸಿಗಳು ಈ ದಾರಿಯನ್ನೇ ಅವಲಂಬಿತರಾಗಿದ್ದಾರೆ, ದಿನ ನಿತ್ಯ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಈ ಕಾಲು ಸಂಕದ ಮೇಲಿಂದಲೇ ನಡೆದುಕೊಂಡು ಬರುವುದರಿಂದ ಅಪಾಯ ಸಂಭವಿಸುವ ಮೊದಲೇ ಇದರ ತುರ್ತು ರಿಪೇರಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *