ಸ್ಟಂಟ್ ಮಾಡಲು ಹೋಗಿ 300 ಅಡಿ ಕಂದಕಕ್ಕೆ ಬಿದ್ದ ಕಾರು: ಯುವಕ ಅಪಾಯದಿಂದ ಪಾರು

ಮಹಾರಾಷ್ಟ್ರ: ಕಾರಿನಲ್ಲಿ ಸ್ಟಂಟ್ ಮಾಡಲು ಹೋಗಿ 300 ಅಡಿ ಕಂದಕಕ್ಕೆ ಬಿದ್ದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಠಾಣ್ ಸದಾವಘಾಪುರ ಪ್ರದೇಶದಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಯುವಕನನ್ನು ಕರಾಡ್ ಗೋಲೇಶ್ವರದ ನಿವಾಸಿಯಾಗಿರುವ 20 ವರ್ಷದ ಸಾಹಿಲ್ ಜಾಧವ್ ಎಂದು ಗುರುತಿಸಲಾಗಿದೆ.ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಸದವಘಾಪುರದಲ್ಲಿರುವ ಟೇಬಲ್ ಪಾಯಿಂಟ್ ಗೆ ಐದು ಮಂದಿ ಯುವಕರ ಗುಂಪೊಂದು ಈ ಪ್ರದೇಶಕ್ಕೆ ಕಾರಿನಲ್ಲಿ ಬಂದಿದೆ.

ಈ ವೇಳೆ ಸಾಹಿಲ್ ಕಾರಿನಲ್ಲಿ ಸ್ಟಂಟ್ ಮಾಡಲು ಯತ್ನಿಸಿದ್ದಾನೆ. ಮಳೆಯ ಪರಿಣಾಮ ಹುಲ್ಲುಗಳು ಜಾರುತ್ತಿದ್ದುದರಿಂದ ಕಾರು ನಿಯಂತ್ರಣ ತಪ್ಪಿ ಬೆಟ್ಟದ ಅಂಚಿಗೆ ಜಾರಿಕೊಂಡು ಬಂದು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದೆ.

ಮೊದಲು ಕಾರಿನಲ್ಲಿ ನಾಲ್ವರು ಕುಳಿತ್ತಿದ್ದು ರೀಲ್ಸ್ ಗಾಗಿ ವಿಡಿಯೋ ಮಾಡಲು ನಾಲ್ವರು ಕಾರಿನಿಂದ ಇಳಿದಿದ್ದಾರೆ ಸಾಹಿಲ್ ಮಾತ್ರ ಕಾರಿನಲ್ಲಿ ಸ್ಟಂಟ್ ಮಾಡಿದ್ದಾನೆ ಇತ್ತ ಸ್ನೇಹಿತರು ವಿಡಿಯೋ ಮಾಡುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಕಾರು ಗೆಳೆಯರ ಕಣ್ಣೆದುರೇ ಕಂದಕಕ್ಕೆ ಉರುಳಿದೆ.

ಘಟನೆಯಲ್ಲಿ ಕಾರು ಸಂಪೂರ್ಣಜಖಂಗೊಂಡಿದ್ದು ಕೆಲ ದೂರದಲ್ಲಿ ಸಾಹಿಲ್ ಗಂಭೀರ ಗಾಯಗೊಂಡು ಬಿದ್ದಿರುವುದು ಕಂಡು ಬಂದಿದೆ.

ಸ್ನೇಹಿತರ ಸಹಾಯದಿಂದ ಸಾಹಿಲ್ ನನ್ನು ಕರಾಡ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *