Breaking
25 Mar 2026, Wed

ಮಂಗಳೂರು: ಚಿನ್ನದ ಬ್ರಾಸ್ಲೈಟನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಮಂಗಳೂರು: ನಗರದ ಜಪ್ಪು ಮಾರ್ಕೆಟ್ ಬಳಿ ರಸ್ತೆಬದಿಯಲ್ಲಿ ಬಿದ್ದಿದ್ದ ಚಿನ್ನದ ಬ್ರಾಸ್ಲೈಟನ್ನು ಆಟೋ ಚಾಲಕರೊಬ್ಬರು ಮರಳಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಮುಳಿಹಿತ್ಲುವಿನ ಆಟೋ ಚಾಲಕ ವಾಮನ ನಾಯಕ್ ವಾರಸುದಾರರಿಗೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಬೆಲೆ ಬಾಳುವ ಹತ್ತುವರೆ ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟನ್ನು ಒಪ್ಪಿಸುವ ಮೂಲಕ ಸಾವ೯ಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಅವರು ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿ ಆಧರಿಸಿ ವಾರಸುದಾರ ಜಪ್ಪಿನಮೊಗರುವಿನ ಚಂದ್ರಹಾಸ.ಕೆ ಎಂಬರಿಗೆ ಚಿನ್ನದ ಬ್ರಾಸ್ಲೈಟನ್ನು ಸುರಕ್ಷಿತವಾಗಿ ತಲುಪಿಸಿದ್ದು, ಇವರ ಈ ಪ್ರಾಮಾಣಿಕತೆಗೆ ಸಾರ್ವಜನಿಕರು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *