ಬಿ.ಎಲ್.ಒ ಕರ್ತವ್ಯದಿಂದ ಕೈಬಿಡುವಂತೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದಿಂದ ಒತ್ತಾಯ

ಬಂಟ್ವಾಳ: ಅಂಗನವಾಡಿ ಕಾರ್ಯಕರ್ತೆಯರು ಬೂತ್ ಲೆವೆಲ್ ಆಫೀಸರ್ ಗಳಾಗಿ (ಬಿ.ಎಲ್.ಓ) ಕರ್ತವ್ಯ ನಿರ್ವಹಿಸುತ್ತಿದ್ದು, ಈ ಜವಾಬ್ದಾರಿಯಿಂದ ನಮ್ಮನ್ನು ಕೈಬಿಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿ ಬಳಿಕ ತಹಸೀಲ್ದಾರ್ ಅವರಿಗೆ ಮನವಿ ನೀಡಿದ್ದಾರೆ.

ಮನವಿಯಲ್ಲಿ, ಬಂಟ್ವಾಳ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು B.L.O ಗಳಾಗಿ ಕಾಯ೯ನಿರ್ವಹಿಸುತ್ತಿದ್ದಾರೆ, ಹಾಗೂ ಈಗ ಉಳಿದ ಕಾಯ೯ಕರ್ತೆಯರನ್ನು ಅವರ ಗಮನಕ್ಕೂ ಬಾರದೇ B.L.O ಗಳೆಂದು ಮಾಹಿತಿ ನೀಡಿರುತ್ತಾರೆ. ಆದರೆ ಈಗಾಗಲೇ (ಸಿ) ದರ್ಜೆ ನೌಕರರನ್ನು B.L.O ಗಳಾಗಿ ನೇಮಿಸಬೇಕೆಂದು ಚುನಾವಣಾ ಆಯೋಗದಿಂದ ಬಂದಿರುತ್ತದೆ. ಆದ ಕಾರಣ ಆಶಾಕಾರ್ಯಕರ್ತೆಯರನ್ನು ಹಾಗೂ ಪಂಚಾಯತಿ ಸಿಬ್ಬಂದಿಗಳನ್ನು B.L.೦ ಕೆಲಸದಿಂದ ಮುಕ್ತರಾಗಿಸುತ್ತೀರಿ, ಆದರೆ ಅದೇ ಅಂಗನವಾಡಿ ಕಾಯ೯ಕರ್ತೆಯರು ಕೂಡ ಗೌರವಧನ ಪಡೆಯುವವರೇ ಹೊರತು ಸರ್ಕಾರಿ ನೌಕರರು ಅಲ್ಲ ಹಾಗೂ (ಸಿ) ದರ್ಜೆಯವರು ಕೂಡ ಅಲ್ಲ. ಆದ್ದರಿಂದ B.L.O ಕೆಲಸದಿಂದ ಎಲ್ಲಾ ಅಂಗನವಾಡಿ ಕಾಯ೯ಕರ್ತೆಯರನ್ನು ಕೈ ಬಿಡಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇವೆ.

(ಸಿ) ದರ್ಜೆ ನೌಕರರಿಗೆ ಒಂದು ನ್ಯಾಯಾ ನಮಗೆ ಒಂದು ನ್ಯಾಯಾ ಬೇಡ. ನಮ್ಮನ್ನು (ಸಿ) ದರ್ಜೆ ನೌಕರರೆಂದು ಪರಿಗಣಿಸಿದರೆ ಆಗ ನಾವೆಲ್ಲರೂ B.L.O ಕೆಲಸ ಮಾಡುವುದು ಎಂದು ತಿಳಿಯಪಡಿಸುತ್ತೇವೆ ಹಾಗೂ ಈಗಾಗಲೇ ನಮಗೆ ಪೋಷಣೆ ಟ್ರ್ಯಾಕರ ನಲ್ಲಿ ತುಂಬಾ ಕೆಲಸದ ಒತ್ತಡ ಇದ್ದು ಬೇರೆ ಇಲಾಖೆ ಕೆಲಸ ಮಾಡಲು ತುಂಬಾ ಕಷ್ಟ ಸಾಧ್ಯವಾಗಿದೆ. ಆದರಿಂದ ಕೂಡಲೇ B.L.O ಕೆಲಸದಿಂದ ಅಂಗನವಾಡಿ ಕಾಯ೯ಕರ್ತೆಯನ್ನು ಮುಕ್ತಗೊಳಿಸಬೇಕೆಂದು ವಿನಂತಿಸುತ್ತಿದ್ದೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *