Breaking
28 Jul 2025, Mon

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಅಗ್ರಹ


ಬೆಂಗಳೂರು : ರಾಜ್ಯದ ವಸತಿ ಇಲಾಖೆಯ ಅಧಿನದಲ್ಲಿರುವ ರಾಜೀವ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರಾದ ಬಿ. ಆರ್. ಪಾಟೀಲ್ ಯವರು ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಮೇಲೆ ಗಂಭೀರವಾದ ಭ್ರಷ್ಟಾಚಾರ ಮತ್ತು ಲಂಚದ ಆರೋಪ ಮಾಡಿರುವುದಲ್ಲದೇ, ಹಣ ಕೊಟ್ರೆ ಮಾತ್ರ ವಸತಿ ಇಲಾಖೆಯಲ್ಲಿ ನಿವೇಶನ ಪಡೆಯಲು ಸಾಧ್ಯ ಎಂದೂ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡುತ್ತಿದ್ದು, ಸತ್ಯಾ ಸತ್ಯತೆ ಬಹಿರಂಗ ಪಡಿಸುವ ಸಲುವಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡವಂತೆ ಬಿಜೆಪಿ ಪ್ರಮುಖರಾದ ಪ್ರಭಾಕರ ಪ್ರಭು ಅಗ್ರಹ ಪಡಿಸಿದ್ದಾರೆ.

ಶಾಸಕ ಬಿ. ಆರ್. ಪಾಟೀಲ್ ಬೆಂಬಲವಾಗಿ ಇನ್ನೊರ್ವ ಕಾಂಗ್ರೆಸ್ ಶಾಸಕ ರಾಜು ಕಾಗೆ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಅಲ್ಪಸಂಖ್ಯಾತ ಇಲಾಖೆಯಲ್ಲಿಯೂ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಎಂದೂ ಆರೋಪ ಮಾಡಿರುವುದಲ್ಲದೆ ರೂ 17 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಮೌಲಾನ ಅಜಾದ್ ವಸತಿ ನಿಲಯ ಕಟ್ಟಡ್ಡಕ್ಕೆ ಅಲ್ಪಸಂಖ್ಯಾತ ಇಲಾಖೆಯ ಮೂಲಕ ರೂ 17 ಕೋಟಿ ಮಂಜೂರು ಆಗಿದ್ದು ಅದೇ ಕಾಮಗಾರಿಗೆ ಬೇರೊಂದು ಇಲಾಖೆಯಿಂದ ಸಹ ಅದೇ ಕಾಮಾಗರಿಗೆ 17 ಕೋಟಿ ಕೆ. ಆರ್.ಡಿ. ಎಲ್. ಮೂಲಕ ಅನುದಾನ ಬಂದುರುತ್ತದೆ. ಇದರಿಂದ ಒಂದೇ ಕಾಮಗಾರಿಗೆ ಎರಡೆರಡು ಇಲಾಖೆಗಳ ಮೂಲಕ ಹಣ ಲಪಾಯಿಟಿಸುವ ಯೋಜನೆ ಆಗಿರುತ್ತದೆ ಎಂದೂ ಕಾಂಗ್ರೆಸ್ ಶಾಸಕರೇ ಆರೋಪ ಹೋರಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಒಂದು ಹೆಜ್ಜೆ ಮುಂದೆ ಹೋಗಿದ್ದು ವಸತಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಬಗ್ಗೆ ಸಮಗ್ರ ತನಿಖೆಯ ದ್ರಷ್ಟಿಯಿಂದ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಈ ಹಿಂದೆ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದಲ್ಲಿ ಸಚಿವ ನಾಗೇಂದ್ರ ರವರನ್ನು ರಾಜೀನಾಮೆ ಕೊಡಿಸಿದ ಇದೇ ಮುಖ್ಯ ಮಂತ್ರಿಗಳು ಈ ವಸತಿ ಹಗರಣದಲ್ಲಿ ಮೌನವಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಈ ರೀತಿಯ ದ್ವಂದ್ವ ನಡವಳಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ.

ಈ ರೀತಿಯಲ್ಲಿ ಸರಣಿ ಸರಣಿಯಲ್ಲಿ ಕಾಂಗ್ರೆಸ್ ಶಾಸಕರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ವಸತಿ ಸಚಿವರ ರಾಜೀನಾಮೆ ತಕ್ಷಣವೇ ಪಡೆಯಬೇಕು ಎಂದೂ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯ ಅಧ್ಯಕ್ಷರನ್ನು ಈ ಮೂಲಕ ಅಗ್ರಹ ಪಡಿಸಿದ್ದಾರೆ.

Leave a Reply

Your email address will not be published. Required fields are marked *