Breaking
25 Sep 2026, Fri

ಉಳ್ಳಾಲ: ನೇಣುಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಉಳ್ಳಾಲ: ಬೆಂದೂರ್‌ವೆಲ್ ಖಾಸಗಿ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ಶ್ರೇಯಾ (19) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲಪಾಡಿಯ ಕಿನ್ಯ ಎಂಬಲ್ಲಿ ನಡೆದಿದೆ.

ಓದಿನಲ್ಲಿಒತ್ತಡ, ಮತ್ತು ತನ್ನ ವರ್ಣ ಕಪ್ಪು ಎಂದು ಅವಮಾನಿಸಿರುದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಡೆತ್‌ ನೋಟ್‌ ಬರೆದಿಟ್ಟಿದ್ದಾರೆ ನನ್ನನ್ನು ಯಾರು ಇಷ್ಟಪಡುದಿಲ್ಲ, ಮನೆಯ ಕಪಾಟಿನ ಮೇಲೆ ಐ ಡೋಂಟ್‌ ಲೈಕ್‌ ದೀಸ್‌ ಜನರೇಷನ್‌, ಸೋ ಐ ಡಿಸೈಡೆಡ್‌ ಟು ಸೂಸೈಡ್‌ ಎಂದು ಬರೆದಿದ್ದಾಳೆ.

ಫಸ್ಟ್‌ ಸೆಮ್ ನ ಎರಡು ವಿಷಯದಲ್ಲಿ ಅನುತ್ತೀರ್ಣಳಾಗಿರುವುದನ್ನು ಡೆತ್‌ನೋಟಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಪೋಸ್ಟ್‌ ಮಾರ್ಟಂಗೆ ಕಳುಹಿಸಲಾಗಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *