ಗಂಗೊಳ್ಳಿ: ವ್ಯಕ್ತಿಯೊವ೯ರು ಬೈಕ್ ನಿಲ್ಲಿಸಿ ಅದರ ಮೇಲೆ ಕುಳಿತಿದ್ದಾಗ ಇನ್ನೊಂದು ಬೈಕ್ ಢಿಕ್ಕಿಯಾಗಿ ಮೃತಪಟ್ಟ ಘಟನೆ ಗಂಗೊಳ್ಳಿ ಎಂಬಲ್ಲಿ ನಡೆದಿದೆ.
ಮೃತರು ಹಕ್ಲಾಡಿ ಗ್ರಾಮದ ಶೀನ (75) ಎಂದು ತಿಳಿದು ಬಂದಿದೆ.

ಶೀನ ಅವರು ನಾಯಕವಾಡಿಯಿಂದ ಆಲೂರು ಹೋಗಲು ಮುಳ್ಳಿಕಟ್ಟೆ ಜಂಕ್ಷನ್ ಬಳಿಯ ನಾಯಕವಾಡಿ ಹೆದ್ದಾರಿಯಲ್ಲಿ ನಿಂತಿರುವಾಗ ಗಣೇಶ ಅವರು ಚಲಾಯಿಸಿಕೊಂಡು ಬಂದ ಬೈಕ್ ಶೀನ ಅವರಿಗೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ, ಅನಂತರ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಗಣೇಶ ಅವರಿಗೂ ಪೆಟ್ಟಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

